Advertisement

ಇಂದಿರಾ ಕ್ಯಾಂಟೀನ್‌ ಗುಣಮಟ್ಟದಲ್ಲಿ ರಾಜಿ ಇಲ್ಲ : ಖಾದರ್‌

03:17 PM Mar 16, 2018 | Team Udayavani |

ಮಂಗಳೂರು : ಇಂದಿರಾ ಕ್ಯಾಂಟೀನ್‌ ಬಡವರಿ ಗಾಗಿ ನಿರ್ಮಿಸಿರುವ ಕ್ಯಾಂಟೀನ್‌. ಹೀಗಾಗಿ ಊಟ, ತಿಂಡಿಯ ಗುಣಮಟ್ಟ, ಪ್ರಮಾಣ ಮತ್ತು ಶುಚಿತ್ವದ ವಿಷಯದಲ್ಲಿ ರಾಜಿ ಬೇಡ. ಎಲೆಕ್ಟ್ರಿಕಲ್‌ ಮಾಪನ ಯಂತ್ರ ವನ್ನು ಕೌಂಟರಿನಲ್ಲಿ ಅಳವಡಿಸುವುದರಿಂದ ಆಹಾರದ ಪ್ರಮಾಣ ದಲ್ಲಿ ಗ್ರಾಹಕರಿಗೆ ಅನುಮಾನವಿದ್ದಲ್ಲಿ ಪರಿಹರಿಸಿ ಕೊಳ್ಳಲು ಅನುಕೂಲವಾಗುತ್ತದೆ ಎಂದು ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ಗುರುವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳ ಪ್ರಗತಿ ಪರಿಶೀಲನ ಸಭೆ ನಡೆಸಿ ಅವರು ಮಾತನಾಡಿದರು. ಆಹಾರದ ರುಚಿಯಲ್ಲಿ ವ್ಯತ್ಯಾಸವಾಗ ಬಾರದು, ಸರಿಯಾದ ರೂಪದಲ್ಲಿ ಗುಣಮಟ್ಟದಲ್ಲಿ ಆಹಾರ ವನ್ನು ಒದಗಿಸಬೇಕು. ಇಂದಿರಾ ಕ್ಯಾಂಟೀನ್‌ನ ಫಲಾನುಭವಿ ಗಳಲ್ಲಿ ಹೆಚ್ಚಿನವರು ಕಾರ್ಮಿಕ ವರ್ಗದ ಜನರು. ಬೆಳಗ್ಗೆ ಉಪಾಹಾರ ಮಾಡಿದ ಅನಂತರ ಮಧ್ಯಾಹ್ನದವರೆಗೆ ಹೊಟ್ಟೆ ತುಂಬಿದಂತಿರಬೇಕು ಎಂದರು.

ಅಂಗವಿಕಲರ ಅನುಕೂಲಕ್ಕಾಗಿ ಕೂಪನ್‌ ಮೀಸಲಿಟ್ಟು ಅಂಗವಿಕಲರಿಗೆ, ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಆದ್ಯತೆ ಮೇಲೆ ಕೂಪನ್‌ ಹಂಚುವಂತೆ ಹಾಗೂ ಸಿಬಂದಿಗೆ ತರಬೇತಿ ನೀಡುವಂತೆ ಸೂಚಿಸಿದರು. ಕೂಪನ್‌ನಲ್ಲಿ ಉಪಾಹಾರದ ನಿಗದಿತ ಬೆಲೆ (12 ರೂ.) ಮತ್ತು ಗ್ರಾಹಕರು ನೀಡುವ ಬೆಲೆ (5 ರೂ.) ಎರಡನ್ನೂ ನಮೂದಿಸಬೇಕು. ಸರಕಾರ ಭರಿಸುತ್ತಿರುವ ವೆಚ್ಚದ ಬಗ್ಗೆ ಗ್ರಾಹಕರಿಗೆ ಸ್ಪಷ್ಟತೆ ಇರಬೇಕು. ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ಸಿಬಂದಿ ಇಂದಿರಾ ಕ್ಯಾಂಟೀನ್‌ನ ಸಮವಸ್ತ್ರ ಮತ್ತು ಟೋಪಿಯನ್ನು ಧರಿಸಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವಂತೆ ಸಚಿವರು ಸೂಚಿ ಸಿದರು. ಸಿಬಂದಿಗೆ ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆ ನಡೆಸಬೇಕು ಮತ್ತು ದೈಹಿಕ ಸದೃಢತೆಯುಳ್ಳ ವ್ಯಕ್ತಿಗಳನ್ನು ನೇಮಿಸಿಕೊಳ್ಳಬೇಕು ಎಂದರು.

ಉಳ್ಳಾಲದಲ್ಲಿ ಹೋಬಳಿ ಮಟ್ಟದ ಕ್ಯಾಂಟೀನ್‌: ಉಳ್ಳಾಲ ನಗರಸಭೆ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ನ ನಿರ್ಮಾಣದ ಕೆಲಸವು ಮುಂದಿನ ವಾರ ಸಂಪೂರ್ಣಗೊಳ್ಳಲಿದೆ. ಇದು ಹೋಬಳಿ ಮಟ್ಟದಲ್ಲಿ ರಾಜ್ಯದಲ್ಲೇ ಪ್ರಥಮ ಇಂದಿರಾ ಕ್ಯಾಂಟೀನ್‌ ಆಗಿರುತ್ತದೆ ಎಂದು ಖಾದರ್‌ ಹೇಳಿದರು.

ದ.ಕ. ಜಿಲ್ಲಾಧಿಕಾರಿ ಡಾ| ಶಶಿಕಾಂತ ಸೆಂಥಿಲ್‌ ಮಾತ ನಾಡಿ, ಗ್ರಾಹಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡ ಬೇಕು. ನೀರಿನ ಪೂರೈಕೆಯಲ್ಲಿ ವ್ಯತ್ಯಯವಾದಲ್ಲಿ ಕೂಡಲೇ ಮಹಾನಗರ ಪಾಲಿಕೆಗೆ ತಿಳಿಸಬೇಕು. ವಿದ್ಯುತ್‌ ಪೂರೈಕೆಯಲ್ಲಿಯೂ ವ್ಯತ್ಯಯವಾದಲ್ಲಿ ಕೂಡಲೇ ಇಲಾಖೆಗೆ ತಿಳಿಸಬೇಕು ಎಂದು ಸೂಚಿಸಿದರು.

Advertisement

ಇಂದಿರಾ ಕ್ಯಾಂಟೀನ್‌ ಕಾಮಗಾರಿಯನ್ನು ಸೂಕ್ತ ರೀತಿ ಯಲ್ಲಿ ಪೂರ್ಣಗೊಳಿಸಬೇಕು. ಜೂನ್‌ ತಿಂಗಳಿನಲ್ಲಿ ಮಳೆ ಜಾಸ್ತಿ ಇರುವುದರಿಂದ ತೊಂದರೆ ಉಂಟಾಗದಂತೆ ನೋಡಿ ಕೊಳ್ಳಬೇಕು. ಉಪಾಹಾರ ಮತ್ತು ಊಟದಲ್ಲಿ ತರುವಂತಹ ಅಂತಿಮ ಬದಲಾವಣೆಯನ್ನು  ತಮ್ಮ ಗಮನಕ್ಕೆ  ತರುವಂತೆ ಸೂಚಿಸಿದರು. ಸಾಯಿ ಹಾಸ್ಪಿಟಾಲಿಟಿ ಸರ್ವಿಸ್‌ನ ಮ್ಯಾನೇಜರ್‌ ಚಂದ್ರಹಾಸ್‌, ಕೆಫ್‌ ಇನ್‌ಫ್ರಾ ಕಂಟ್ರಾಕ್ಟರ್‌ ರೊನಾಲ್ಡ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next