Advertisement

ವಿಜಯಾ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ಪಿಲಾರು ಪರಾರಿ ಚಂದ್ರಹಾಸ ಶೆಟ್ಟಿ ನಿಧನ

10:26 AM Nov 18, 2022 | Team Udayavani |

ಶಿರ್ವ: ವಿಜಯಾ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ಪಿಲಾರು ಪರಾರಿ ಚಂದ್ರಹಾಸ ಶೆಟ್ಟಿ (71) ಅವರು ನ.18 ರಂದು ಉಡುಪಿಯ ಸ್ವಗೃಹದಲ್ಲಿ ನಿಧನ ಹೊಂದಿದರು.

Advertisement

ಪಿಲಾರು ತ‌ಂಬಿದಬೆಟ್ಟು ಶ್ರೀ ಧರ್ಮ ಜಾರಂದಾಯ ದೈವಸ್ಥಾನ, ಪಿಲಾರು ಪರಾರಿ ಕೊಡಮಣಿತ್ತಾಯ ದೈವಸ್ಥಾನ, ಪಿಲಾರು ಪರಾರಿ ಶ್ರೀ ಬಬ್ಬುಸ್ವಾಮಿ ದೈವಸ್ಥಾನಗಳ ಮುಖ್ಯಸ್ಥರಾಗಿದ್ದ ಅವರು ಗ್ರಾಮದ ದೈವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ಶ್ರಮಿಸಿದ್ದರು. ಗ್ರಾಮದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಜನಾನುರಾಗಿಯಾಗಿದ್ದರು.

ಮೃತರು ಪತ್ನಿ ವಿಜಯಾ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ಕುತ್ಯಾರು ಕೇಂಜ ಅಬ್ಬೆಟ್ಟುಗುತ್ತು ಆಶಾ ಶೆಟ್ಟಿ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next