Advertisement

ಇಂಡಿಗೋ ಇಂದೋರ್‌ ಎಡವಟ್ಟು

06:20 AM Jan 15, 2018 | Harsha Rao |

ಹೊಸದಿಲ್ಲಿ: ತೀರಾ ಇತ್ತೀಚೆಗಷ್ಟೇ 1,500 ಮಂದಿ ಪ್ರಯಾಣಿಕರಿದ್ದ ರೈಲು ಮಧ್ಯಪ್ರದೇಶಕ್ಕೆ ಹೋಗುವುದರ ಬದಲಾಗಿ ಮಹಾರಾಷ್ಟ್ರಕ್ಕೆ ಹೋಗಿ ಸುದ್ದಿಯಾಗಿತ್ತು. ಇದರಿಂದಾಗಿ ರೈಲ್ವೇ ಇಲಾಖೆ ನಗೆಪಾಟಲಿಗೂ ಈಡಾಗಿತ್ತು. ಅದೇ ಮಾದರಿಯ ಪ್ರಕರಣ ವಿಮಾನಯಾನ ಕ್ಷೇತ್ರದಲ್ಲಿಯೂ ನಡೆದಿದೆ. ಖಾಸಗಿ ವಿಮಾನ ಸಂಸ್ಥೆ ಇಂಡಿಗೋದಲ್ಲಿ ಮಧ್ಯಪ್ರದೇಶದ ಇಂದೋರ್‌ಗೆ ಹೋಗಬೇಕಾಗಿದ್ದ ವ್ಯಕ್ತಿಯೊಬ್ಬರು ಮಹಾರಾಷ್ಟ್ರದ ಇಂದೋರ್‌ನಲ್ಲಿ ಇಳಿದಿದ್ದಾರೆ. ವಿಮಾನಯಾನ ಸಂಸ್ಥೆಯೂ ಈ ಘಟನೆಯನ್ನು ಹೌದು ಎಂದು ಒಪ್ಪಿಕೊಂಡಿದ್ದು, ಮೂವರು ಸಿಬಂದಿ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡಿದೆ.

Advertisement

ಅಂದ ಹಾಗೆ ಈ ಘಟನೆ ನಡೆದದ್ದು ಶುಕ್ರವಾರ. ಇದೊಂದು ಭದ್ರತಾ ಲೋಪ ಎಂದು ಪ್ರತಿಪಾದಿಸಿರುವ ಸಂಸ್ಥೆ ಆಂತರಿಕವಾಗಿ ತನಿಖೆಗೆ ಆದೇಶ ನೀಡಿದೆ. ಪ್ರಯಾಣಿಕರೊಬ್ಬರು ಟಿಕೆಟ್‌ ಪಡೆದ ಪ್ರಕಾರ, ಇಂಡಿಗೋ ಸಂಸ್ಥೆಯ 6ಇ 656 ವಿಮಾನದಲ್ಲಿ ದಿಲ್ಲಿಯಿಂದ ನಾಗ್ಪುರಕ್ಕೆ ಪ್ರಯಾಣಿಸಬೇಕಾಗಿತ್ತು. ಚೆಕ್‌ ಇನ್‌ ಸಂದರ್ಭದಲ್ಲಿ ಇಂದೋರ್‌ಗೆ  ಹೋಗುವ ವಿಮಾನಕ್ಕಾಗಿನ ಬೋರ್ಡಿಂಗ್‌ ಪಾಸ್‌ ನೀಡಲಾಗಿತ್ತು. ಆದರೆ ಅವರು ನಾಗ್ಪುರಕ್ಕೆ ಹೋಗುವ ವಿಮಾನಕ್ಕೆ ಹೋಗಿ ದ್ದರು. ಅಲ್ಲಿದ್ದ ಕ್ಯಾಬಿನ್‌ ಸಿಬಂದಿ ಕೂಡ ಅಚಾತುರ್ಯ ಪತ್ತೆಹಚ್ಚಲಿಲ್ಲ. 
ಗಮನಾರ್ಹ ಅಂಶವೆಂದರೆ ಇದು ಪ್ರಯಾ ಣಿಕನ ಲೋಪವಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿ ಹೇಳಿದ್ದಾರೆ. ನಾಗ್ಪುರ ವಿಮಾನ ಏರುತ್ತಿದ್ದಂ ತೆಯೇ ಅವರು ನಿದ್ರಿಸಿದ್ದರು. 2017ರಲ್ಲಿ ಇದೇ ಮಾದರಿಯ ಮತ್ತೂಂದು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಬಿಸಿಎಎಸ್‌) ಇಂಡಿಗೋ ವಿರುದ್ಧ ಕ್ರಮ ಕೈಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next