Advertisement

ಢಾಕಾ ಆಗಸ: ಕೂದಲೆಳೆಯಲ್ಲಿ ತಪ್ಪಿದ ಇಂಡಿಗೋ-ಏರ್‌ ಡೆಕ್ಕನ್‌ ಢಿಕ್ಕಿ

05:38 PM May 11, 2018 | Team Udayavani |

ಮುಂಬಯಿ : ಕಳೆದ ಮೇ 2ರಂದು ಢಾಕಾ ವಾಯು ಪ್ರದೇಶದಲ್ಲಿ  ಹಾರಾಟದಲ್ಲಿದ್ದ ಇಂಡಿಗೋ ಮತ್ತು ಏರ್‌ ಡೆಕ್ಕನ್‌ ಪ್ರಯಾಣಿಕರ ವಿಮಾನಗಳು ಅಪಾಯಕಾರಿ ಎನಿಸುವಷ್ಟು ಪರಸ್ಪರ ನಿಕಟಕ್ಕೆ ಬಂದಾಗ ಸ್ವಯಂಚಾಲಿತವಾಗಿ ನೀಡಲ್ಪಟ್ಟ ಎಚ್ಚರಿಕೆಯ ಫ‌ಲವಾಗಿ ವಿಮಾನಗಳು ಆಗಸದಲ್ಲಿ ಪರಸ್ಪರ ಢಿಕ್ಕಿಯಾಗುವ ಭಾರೀ ದುರಂತವೊಂದು ಕೂದಲೆಳೆಯಲ್ಲಿ ತಪ್ಪಿತೆಂದು ಮೂಲಗಳು ತಿಳಿಸಿವೆ.

Advertisement

ಮೇ 2ರಂದು ಅಗರ್ತಲಾಕ್ಕೆ ಹೋಗುತ್ತಿದ್ದ ಇಂಡಿಗೋ ವಿಮಾನ ಮತ್ತು ಅಗರ್ತಲಾದಿಂದ ಕೋಲ್ಕತಾಗೆ ಬರುತ್ತಿದ್ದ ಏರ್‌ ಡೆಕ್ಕನ್‌ ವಿಮಾನ ಢಾಕಾ ವಾಯು ಪ್ರದೇಶದಲ್ಲಿ ಅತ್ಯಂತ ಅಪಾಯಕಾರಿ ಎನಿಸುವಷ್ಟು ನಿಕಟಕ್ಕೆ ಬಂದಿದ್ದವು. ಆ ಸಂದರ್ಭದಲ್ಲಿ  ಸ್ವಯಂಚಾಲಿತ ಎಚ್ಚರಿಕೆ ಗೋಚರವಾಗಿ ಎರಡೂ ವಿಮಾನಗಳ ಪೈಲಟ್‌ಗಳು ಸಂಭವನೀಯ ಮಹಾ ದುರಂತವನ್ನು ತಪ್ಪಿಸುವಲ್ಲಿ ಸಫ‌ಲರಾದರು ಎಂದು ಮೂಲಗಳು ಹೇಳಿವೆ. 

ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದ್ದು ವಿಮಾನಾಪಘಾತ ತನಿಖಾ ದಳ (ಎಎಐಬಿ) ಇದರ ಬಗ್ಗೆ ತನಿಖೆ ಕೈಗೊಂಡಿರುವುದಾಗಿ ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next