Advertisement

Dhaka; ವರ್ಷಾಂತ್ಯಕ್ಕೆ ಬಾಂಗ್ಲಾ ಸಂಸತ್‌ ಚುನಾವಣೆ ಸಾಧ್ಯತೆ?

09:09 PM Jan 05, 2025 | Team Udayavani |

ಢಾಕಾ: ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆ ಕುರಿತು ಈಗಾಗಲೇ ಸುಳಿವು ನೀಡಿದ್ದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನುಸ್‌ ಈಗ ಎರಡು ಸಂಭಾವ್ಯ ದಿನಾಂಕಗಳನ್ನು ಮುಂದಿಟ್ಟಿದ್ದಾರೆ. ಪ್ರಸಕ್ತ ವರ್ಷದ ಡಿಸೆಂಬರ್‌ನಲ್ಲಿ ಅಥವಾ 2026ರ ಮಧ್ಯಭಾಗದಲ್ಲಿ ಚುನಾವಣೆ ನಡೆಸುವುದಾಗಿ ಹೇಳಿದ್ದಾರೆ. ಯುನೈಟೆಡ್‌ ಕಿಂಗ್‌ಡಮ್‌ನ ಸಂಸದೆ ಸಂಸದೆ ರೂಪಾ ಹಕ್‌ ಜತೆಗಿನ ಮಾತುಕತೆ ವೇಳೆ ಯೂನುಸ್‌ ಈ ಮಾಹಿತಿ ನೀಡಿದ್ದಾರೆ. ಜತೆಗೆ, ಮುಂದಿನ ಚುನಾವಣೆಯು ಮುಕ್ತ ಹಾಗೂ ನ್ಯಾಯಸಮ್ಮತವಾಗಿರಲಿದೆ ಎಂದೂ ಅವರು ಹೇಳಿದ್ದಾರೆ.

Advertisement

‘ಕಳೆದ 3 ಚುನಾವಣೆಗಳಲ್ಲೂ ಜನರಿಗೆ ಹಕ್ಕು ಚಲಾಯಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ದೇಶದಲ್ಲಿ ನಕಲಿ ಸಂಸತ್‌, ನಕಲಿ ಸಂಸದರು ಮತ್ತು ನಕಲಿ ಸ್ಪೀಕರ್‌ ಇದ್ದರು. ಶೇಖ್‌ ಹಸೀನಾ ಅವಧಿಯಲ್ಲಿ ಜನರು ಹೇಗೆ ತುಳಿತಕ್ಕೆ ಒಳಗಾಗಿದ್ದರೆಂದರೆ, ಕೊನೆಗೆ ಅವರೆಲ್ಲರೂ ಒಗ್ಗಟ್ಟಾಗಿ ಪ್ರತಿರೋಧ ಒಡ್ಡಬೇಕಾಯಿತು’ ಎಂದು ಯೂನುಸ್‌ ಹೇಳಿದ್ದಾರೆ.

ಅವ್ಯವಹಾರ ತನಿಖೆ: ಇದೇ ವೇಳೆ, 2014, 2018 ಮತ್ತು 2024 ಸೇರಿದಂತೆ ಈ ಹಿಂದೆ ನಡೆದ ಚುನಾವಣೆಗಳಲ್ಲಿ ಆಗಿರುವ ಅಕ್ರಮಗಳನ್ನು ತನಿಖೆ ಮಾಡಲು ಬಾಂಗ್ಲಾ ಚುನಾವಣಾ ಆಯೋಗ ಮುಂದಾಗಿದೆ. ಈ ಕುರಿತು ಕಾರಣಗಳನ್ನು ಹುಡುಕಿ ವರದಿ ನೀಡುವಂತೆ ಎಲ್ಲ 10 ಪ್ರಾದೇಶಿಕ ಚುನಾವಣಾಧಿಕಾರಿಗಳಿಗೂ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next