ಮಂಬೈ: ಭಾರತದಲ್ಲಿ ಸದ್ಯ ಮಹಿಳಾ ಕ್ರಿಕೆಟ್ ಕೂಡಾ ಹೆಚ್ಚಿನ ಮಹತ್ವ ಪಡೆಯುತ್ತಿದೆ. ಪುರುಷರ ಕ್ರಿಕೆಟ್ ನಂತೆ ಮಹಿಳಾ ಕ್ರಿಕೆಟ್ ಗೂ ಹೆಚ್ಚಿನ ಅವಕಾಶ ನೀಡಲು ಈ ಬಾರಿ ಮಹಿಳಾ ಐಪಿಎಲ್ ನಡೆಸಲು ಬಿಸಿಸಿಐ ಮುಂದಾಗಿದ್ದು ನಿಮಗೆ ಗೊತ್ತೆ ಇದೆ. ಅದೇ ರೀತಿ ಇದೀಗ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ.
ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನವಾದ ವೇತನ ನೀಡಲು ಬಿಸಿಸಿಐ ಮುಂದಾಗಿದೆ. ಈ ಹಿಂದೆ ಮಹಿಳಾ ಕ್ರಿಕೆಟಿಗರಿಗೆ ಪುರುಷರಿಗಿಂತ ಕಡಿಮೆ ವೇತನ ಸಿಗುತ್ತಿತ್ತು. ಈ ತಾರತಮ್ಯವನ್ನು ಹೋಗಲಾಡಿಸಲು ಬಿಸಿಸಿಐ ನಿರ್ಧರಿಸಿದ್ದು, ಗುತ್ತಿಗೆಯಲ್ಲಿರುವ ಆಟಗಾರರಿಗೆ ಇನ್ನು ಮುಂದೆ ಸಮಾನ ಮ್ಯಾಚ್ ಫೀಸ್ ಸಿಗಲಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ‘ತಾರತಮ್ಯವನ್ನು ಎದುರಿಸಲು ಬಿಸಿಸಿಐನ ಮೊದಲ ಹೆಜ್ಜೆಯನ್ನು ಘೋಷಿಸಲು ನನಗೆ ಸಂತೋಷವಾಗುತ್ತಿದೆ. ಕಾಂಟ್ರಾಕ್ಟ್ ನಲ್ಲಿರುವ ಮಹಿಳಾ ಕ್ರಿಕೆಟಿಗರಿಗೆ ವೇತನ ಇಕ್ವಿಟಿ ನೀತಿಯನ್ನು ಜಾರಿಗೊಳಿಸುತ್ತಿದ್ದೇವೆ. ಭಾರತೀಯ ಕ್ರಿಕೆಟ್‌ನಲ್ಲಿ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯ ಶುಲ್ಕ ಒಂದೇ ಆಗಿರಲಿದೆ ಎಂದಿದ್ದಾರೆ.
ಇದನ್ನೂ ಓದಿ:80 ಮತ್ತು 90 ರ ದಶಕದ ಅನೇಕ ಹಿಟ್‌ಗಳ ನಿರ್ದೇಶಕ ಎಸ್ಮಾಯಿಲ್ ಶ್ರಾಫ್ ನಿಧನ
ಬಿಸಿಸಿಐ ಮಹಿಳಾ ಕ್ರಿಕೆಟಿಗರಿಗೆ ಪುರುಷರಿಗೆ ಸಮಾನವಾದ ಪಂದ್ಯ ಶುಲ್ಕವನ್ನು ನೀಡಲಾಗುತ್ತದೆ. ಟೆಸ್ಟ್ ನಲ್ಲಿ ಪ್ರತಿ ಪಂದ್ಯಕ್ಕೆ 15 ಲಕ್ಷ ರೂ., ಪ್ರತಿ ಏಕದಿನ ಪಂದ್ಯಕ್ಕೆ 6 ಲಕ್ಷ ರೂ., ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೆ 3 ಲಕ್ಷ ರೂ ನೀಡಲಾಗುತ್ತದೆ.