Advertisement
ಕಾರ್ಮಿಕ ವಲಯದ ಬಗ್ಗೆ ಬೆಳಕು ಚೆಲ್ಲಲಾಗಿದೆ. ಸಾಮಾಜಿಕ ಕ್ಷೇತ್ರಕ್ಕೆ ಹಲವು ರೀತಿಯ ಕೊಡುಗೆಗಳು ನೀಡಲಾಗಿದೆ. ಆದರೆ ಈ ಬಗ್ಗೆ ಯಾವುದೇ ರೀತಿಯ ಸ್ಪಷ್ಟತೆಯಿಲ್ಲ. ಕನಿಷ್ಠ ಕೂಲಿ ಬಗ್ಗೆ ಹೇಳಲಾಗಿದೆ. ಆದರೆ ಸರಿಯಾದ ಮಾಹಿತಿ ನೀಡಿಲ್ಲ.
Related Articles
Advertisement
ಕೃಷಿ ವಲಯ ಕೂಡ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದೆ. ಈ ವಲಯವನ್ನು ಮರೆಯಲಾಗಿದೆ. ಇದರ ಜೊತೆಗೆ ಯುವ ಜನರು ಉದ್ಯೋಗವಿಲ್ಲದೆ, ಉದ್ಯೋಗಕ್ಕಾಗಿ ಹುಡುಕಾಟ ದಲ್ಲಿದ್ದಾರೆ. ಆದರೆ ಉದ್ಯೋಗ ಸೃಷ್ಟಿ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿಲ್ಲ.
ಈ ಹಿಂದೆ ಅರುಣ್ ಜೇಟ್ಲಿ ಅವರು ಹಣಕಾಸು ಸಚಿವ ರಾಗಿದ್ದಾಗ ಮಂಡನೆ ಮಾಡಿರುವ ಹಲವು ಯೋಜನೆಗಳೇ ಮತ್ತೆ ಮರುಕಳಿಸಿವೆ. ಜಗತ್ತು ಪರಿಸರ ಮಾಲಿನ್ಯದಿಂದ ಬಳಲುತ್ತಿದೆ. ಜಾಗತಿಕ ಮಟ್ಟದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.
ಆದರೆ ಇದಕ್ಕೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಬಜೆಟ್‌ನಲ್ಲಿ ಯಾವುದೇ ರೀತಿಯ ಉತ್ತರವಿಲ್ಲ. ಪರಿಸರ ಮಾಲಿನ್ಯ ದೊಡ್ಡ ತೊಂದರೆಯಾಗಿ ಪರಿಣಮಿಸಿರುವುದರ ಜೊತೆಗೆ ನೀರಿನ ಸಮಸ್ಯೆ ಕೂಡ ಇನ್ನಿಲ್ಲದಂತೆ ಕಾಡುತ್ತಿದ್ದು, ಇದಕ್ಕೆ ಪರಿಹಾರ ಬಜೆಟ್‌ನಲ್ಲಿ ಇಲ್ಲ. ಒಟ್ಟಾರೆ ಈ ಬಜೆಟ್ ಜನರ ನಿರೀಕ್ಷೆಯಂತೆ ಇಲ್ಲ.
* ಡಾ.ಎಂ.ಚಂದ್ರಪೂಜಾರಿ, ಸಾಮಾಜಿಕ ಸಂಶೋಧಕರು