Advertisement

ಮೆಲ್ಬರ್ನ್: ಮಳೆಗೆ ಬಲಿಯಾದ ಭಾರತದ ಅಭ್ಯಾಸ ಅವಧಿ

12:43 PM Jan 03, 2021 | Team Udayavani |

ಮೆಲ್ಬರ್ನ್: ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಮೆಲ್ಬರ್ನ್ ಮೈದಾನದಲ್ಲಿ ಅಭ್ಯಾಸ ನಡೆಸಬೇಕಾಗಿದ್ದ ಭಾರತ ತಂಡ ಮಳೆಯ ಕಾರಣ ಒಳಾಂಗಣ ಅಭ್ಯಾಸ ನಡೆಸಬೇಕಾಯಿತು.

Advertisement

ಜ.7ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ- ಆಸೀಸ್ ನಡುವಿನ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ. ಪಂದ್ಯಕ್ಕೂ ಮೊದಲು ಎರಡು ದಿನ ಮೆಲ್ಬರ್ನ್ ಮೈದಾನದಲ್ಲಿ ಉಭಯ ತಂಡಗಳ ಅಭ್ಯಾಸ ನಿಗದಿಯಾಗಿತ್ತು. ಸೋಮವಾರ ಎರಡೂ ತಂಡಗಳು ಸಿಡ್ನಿಗೆ ಪ್ರಯಾಣ ಬೆಳೆಸಲಿವೆ.

ಇದನ್ನೂ ಓದಿ:ನಂ.1 ರ್‍ಯಾಂಕಿಂಗ್‌ ಮೇಲೆ ನ್ಯೂಜಿಲ್ಯಾಂಡ್ ಕಣ್ಣು

ಭಾರತ ತಂಡದ ಸದಸ್ಯರಾದ ರೋಹಿತ್ ಶರ್ಮಾ, ರಿಷಭ್ ಪಂತ್, ನವದೀಪ್ ಸೈನಿ, ಶುಬ್ಮನ್ ಗಿಲ್, ಪೃಥ್ವಿ ಶಾ ಅವರು ಹೋಟೆಲ್ ಗೆ ತೆರಳಿದ ಬಳಿಕ ಹೊಸ ವಿವಾದ ಸೃಷ್ಟಿಯಾಗಿದೆ. ಈ ಆಟಗಾರರು ಕೋವಿಡ್ ನಿಯಮಗಳನ್ನು ಮುರಿದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶನಿವಾರ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಣೆ ಹೊರಡಿಸಿದ್ದು, ಈ ಆಟಗಾರರು ತಂಡದಿಂದ ಹೊರಗಿರಲಿದ್ದಾರೆ. ಪ್ರತ್ಯೇಕವಾಗಿ ಅಭ್ಯಾಸ ನಡೆಸಲಿದ್ದಾರೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next