ಹೊಸದಿಲ್ಲಿ: ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಕೋವಿಡ್ ವೈರಸ್ ನ ಒಮಿಕ್ರಾನ್ ರೂಪಾಂತರದ ಒಟ್ಟು ಪ್ರಕರಣಗಳು 238 ಕ್ಕೆ ಏರಿದೆ.
ಹರಿಯಾಣ ಮತ್ತು ಉತ್ತರಾಖಂಡ್ ರಾಜ್ಯದಲ್ಲಿ ಬುಧವಾರ ಮೊದಲ ಒಮಿಕ್ರಾನ್ ರೂಪಾಂತರದ ಪ್ರಕರಣಗಳು ಪತ್ತೆಯಾಗಿದೆ.
65 ಪ್ರಕರಣಗಳೊಂದಿಗೆ ಒಮಿಕ್ರಾನ್ ನ ಗರಿಷ್ಠ ಪತ್ತೆಯಾದ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ. 57 ಪ್ರಕರಣಗಳೊಂದಿಗೆ ದೆಹಲಿ ಎರಡನೇ ಸ್ಥಾನದಲ್ಲಿದೆ, ತೆಲಂಗಾಣದಲ್ಲಿ 24, ಗುಜರಾತ್‌ನಲ್ಲಿ 23, ರಾಜಸ್ಥಾನದಲ್ಲಿ 22 ಮತ್ತು ಕರ್ನಾಟಕದಲ್ಲಿ 19 ಪ್ರಕರಣಗಳು ವರದಿಯಾಗಿವೆ.
ಬುಧವಾರ ಗುಜರಾತ್‌ನಲ್ಲಿ ಒಂದೇ ದಿನದಲ್ಲಿ ಒಮಿಕ್ರಾನ್ ರೂಪಾಂತರದ ಒಂಬತ್ತು ಪ್ರಕರಣಗಳು ವರದಿಯಾಗಿವೆ, ರಾಜ್ಯದಲ್ಲಿ ಒಟ್ಟಾರೆಯಾಗಿ 23 ಕ್ಕೆ ತಲುಪಿದೆ. ಅಹಮದಾಬಾದ್‌ನಲ್ಲಿ ಐದು ಪ್ರಕರಣಗಳು ವರದಿಯಾಗಿದ್ದರೆ, ಆನಂದ್ ಮತ್ತು ಮೆಹ್ಸಾನಾ ಜಿಲ್ಲೆಗಳಲ್ಲಿ ತಲಾ ಎರಡು ಪ್ರಕರಣಗಳು ವರದಿಯಾಗಿವೆ.
ಹರಿಯಾಣದಲ್ಲಿ ವರದಿಯಾದ 23 ಪ್ರಕರಣಗಳಲ್ಲಿ ನಾಲ್ವರು ಗುಣಮುಖರಾಗಿದ್ದು, 19 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.