Advertisement

Covid; ಭೂಮಿಯಲ್ಲಿ ಲಾಕ್‌ಡೌನ್‌,ಚಂದ್ರನಲ್ಲಿ ಕೂಲ್‌ ಕೂಲ್‌!

01:34 AM Oct 01, 2024 | Team Udayavani |

ಹೊಸದಿಲ್ಲಿ: 2020ರ ಕೋವಿಡ್‌-19 ಲಾಕ್‌ಡೌನ್‌ ಕೇವಲ ಮನುಕುಲದ ಮೇಲೆ ಮಾತ್ರವಲ್ಲ, ದೂರದ ಚಂದಿರನ ಮೇಲೂ ಪರಿಣಾಮ ಬೀರಿತ್ತು ಎಂದರೆ ನಂಬುತ್ತೀರಾ? ನಂಬಲೇಬೇಕು. 2020ರ ಎಪ್ರಿಲ್‌-ಮೇ ಅವಧಿಯಲ್ಲಿ ರಾತ್ರಿ ಹೊತ್ತು ಚಂದ್ರನ ಮೇಲ್ಮೆ„ ತಾಪಮಾನ ಗಣನೀಯವಾಗಿ ಇಳಿಕೆಯಾ­ಗಿತ್ತು ಎಂಬ ವಿಚಾರವನ್ನು ಭಾರತೀಯ ಸಂಶೋಧಕರು ಕಂಡುಕೊಂಡಿದ್ದಾರೆ.

Advertisement

2017ರಿಂದ 2023ರ ಅವಧಿಯಲ್ಲಿ ಸಂಶೋಧಕರ ತಂಡವು ಚಂದ್ರನ 6 ವಿಭಿನ್ನ ಪ್ರದೇಶಗಳ ರಾತ್ರಿ ಹೊತ್ತಿನ ತಾಪಮಾನವನ್ನು ವಿಶ್ಲೇಷಿಸಿತ್ತು. ಆಗ ಲಾಕ್‌ಡೌನ್‌ ಅವಧಿಯಲ್ಲಿ(ಇತರ ವರ್ಷಗಳ ಇದೇ ಅವಧಿಗೆ ಹೋಲಿಸಿದಾಗ) ಚಂದ್ರನ ತಾಪಮಾನದಲ್ಲಿ 8-10 ಕೆಲ್ವಿನ್‌(ಮೈನಸ್‌ 265 ಡಿ.ಸೆ.ನಿಂದ ಮೈನಸ್‌ 173ಡಿ.ಸೆ.ನಷ್ಟು) ಇಳಿಕೆ ಕಂಡು­­ಬಂತು ಎಂದು ಲ್ಯಾಬೊರೇಟರಿಯ ನಿರ್ದೇಶಕ ಪ್ರೊ| ಅನಿಲ್‌ ಭಾರದ್ವಾಜ್‌ ತಿಳಿಸಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಜಗತ್ತಿನಾದ್ಯಂತ ಮಾನವ ಚಟುವಟಿಕೆಗಳು ಇಳಿಕೆಯಾಗಿತ್ತು. ಪರಿಣಾಮವೆಂಬಂತೆ ಹಸುರುಮನೆ ಅನಿಲದ ಹೊರಸೂಸು ವಿಕೆ ತಗ್ಗಿತ್ತು. ಭೂಮಿಯಿಂದ ಹೊರಸೂಸುವ ವಿಕಿರಣಗಳ ಪ್ರಮಾಣ ತಗ್ಗಿದ್ದೇ ಇದಕ್ಕೆ ಕಾರಣವಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next