Advertisement

Under-19 ದ್ವಿತೀಯ ಟೆಸ್ಟ್‌ : ಬೃಹತ್‌ ಮೊತ್ತದತ್ತ ಭಾರತ ಓಟ

12:31 AM Oct 08, 2024 | Team Udayavani |

ಚೆನ್ನೈ: ಚೆನ್ನೈಯಲ್ಲಿ ಸೋಮ ವಾರ ಆರಂಭಗೊಂಡ ಆಸ್ಟ್ರೇಲಿಯ ಎದುರಿನ 2ನೇ ಅಂಡರ್‌-19 ಟೆಸ್ಟ್‌ ಪಂದ್ಯದಲ್ಲಿ ಭಾರತ ಬೃಹತ್‌ ಮೊತ್ತದ ಸೂಚನೆ ನೀಡಿದೆ. ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟಿಗೆ 316 ರನ್‌ ಪೇರಿಸಿದೆ.

Advertisement

ಭಾರತದ ಸರದಿಯಲ್ಲಿ ನಾಲ್ವರಿಂದ ಅರ್ಧ ಶತಕ ದಾಖಲಾಯಿತು. ಇವರಲ್ಲಿ 94 ರನ್‌ ಮಾಡಿದ ನಿತ್ಯ ಪಾಂಡ್ಯ ಅವರದು ಸರ್ವಾಧಿಕ ಗಳಿಕೆ ಆಗಿತ್ತು (135 ಎಸೆತ, 12 ಬೌಂಡರಿ). ಕೆ.ಪಿ. ಕಾರ್ತಿಕೇಯ 71, ನಿಖೀಲ್‌ ಕುಮಾರ್‌ 61 ರನ್‌ ಮಾಡಿದರು. 61 ರನ್‌ ಮಾಡಿರುವ ನಾಯಕ ಸೋಹನ್‌ ಪಟವರ್ಧನ್‌ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ವಿಹಾನ್‌ ಮಲ್ಹೋತ್ರಾ (10) ಮತ್ತು ವೈಭವ್‌ ಸೂರ್ಯವಂಶಿ (3) ಬೇಗನೇ ಪೆವಿಲಿಯನ್‌ ಸೇರಿಕೊಂಡ ಬಳಿಕ ಪಾಂಡ್ಯ-ಕಾರ್ತಿಕೇಯ 112 ರನ್‌ ಜತೆಯಾಟ ನಿಭಾಯಿಸಿ ದರು. ಸೋಹನ್‌ -ನಿಖಿಲ್‌ ಜೋಡಿ ಯಿಂದಲೂ ಶತಕದ ಜತೆಯಾಟ ದಾಖಲಾಯಿತು. ಇವರಿಂದ 5ನೇ ವಿಕೆಟಿಗೆ 105 ರನ್‌ ಒಟ್ಟುಗೂಡಿತು. ಮೊದಲ ಟೆಸ್ಟ್‌ ಪಂದ್ಯವನ್ನು ‌ ಭಾರತ 2 ವಿಕೆಟ್‌ಗಳಿಂದ ಜಯಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next