ಮುಂಬೈ: ಭಾರತದ ನೂತನ ವಿಮಾನಯಾನ ಸಂಸ್ಥೆ ಆಕಾಶ ಏರ್ ನ ಮೊದಲ ವಿಮಾನ ಇಂದು ಮುಂಬೈನಿಂದ ಅಹಮದಾಬಾದ್ ಗೆ ಸಂಚಾರ ನಡೆಸಿತು. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ಅವರು ಎಂಒಎಸ್ ಜನರಲ್ ವಿಜಯ್ ಕುಮಾರ್ ಸಿಂಗ್ (ನಿವೃತ್ತ) ಅವರೊಂದಿಗೆ ಉದ್ಘಾಟಿಸಿದರು.
ಭಾರತದ ಶೇರು ಮಾರುಕಟ್ಟೆ ದಿಗ್ಗಜ ರಾಕೇಶ್ ಜುಂಜುನ್ ವಾಲಾ ಅವರ ಆಕಾಶ ಏರ್ ಜುಲೈ 22ರಂದು ಅಹಮದಾಬಾದ್, ಬೆಂಗಳೂರು, ಮುಂಬೈ ಮತ್ತು ಕೊಚ್ಚಿಯಲ್ಲಿ ಆರಂಭಿಕ ನೆಟ್‌ವರ್ಕ್‌ನೊಂದಿಗೆ ತನ್ನ ಮೊದಲ ವಾಣಿಜ್ಯ ವಿಮಾನಗಳಿಗಾಗಿ ಟಿಕೆಟ್ ಬುಕಿಂಗ್ ಅನ್ನು ತೆರೆದಿತ್ತು.
ಇದನ್ನೂ ಓದಿ:ಎದೆ ನೋವು ಕಾಣಿಸಿಕೊಂಡ ವ್ಯಕ್ತಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಸಾವು: ಪ್ರತಿಭಟನೆ
QP ಏರ್ಲೈನ್ ಕೋಡ್ನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಕಂಪನಿಯು ಕಳೆದ ಜುಲೈ 7ರಂದು ನಾಗರಿಕ ವಿಮಾನಯಾನಗಳ ಮಹಾ ನಿರ್ದೇಶಕರ ಕಚೇರಿಯಿಂದ ವಿಮಾನ ಸಂಚಾರಕ್ಕೆ ಅನುಮತಿ ಪಡೆದುಕೊಂಡಿತ್ತು. ಮುಂಬೈ-ಅಹಮದಾಬಾದ್ ಮತ್ತು ಬೆಂಗಳೂರು-ಕೊಚ್ಚಿ ಮಾರ್ಗಗಳಲ್ಲಿ ಆಕಾಶ ಏರ್ಲೈನ್ಸ್ನ ವಿಮಾನಗಳು ಸಂಚರಿಸಲಿದೆ. ಬೆಂಗಳೂರು-ಕೊಚ್ಚಿ ಮಾರ್ಗದಲ್ಲಿ ಆಗಸ್ಟ್ 13ರಿಂದ ವಿಮಾನ ಸಂಚಾರವನ್ನು ಕಂಪನಿ ಆರಂಭಿಸಲಿದೆ. ಬೆಂಗಳೂರಿನಿಂದ ಕೊಚ್ಚಿಗೆ ಬೆಳಿಗ್ಗೆ 7.15 ಮತ್ತು 11 ಗಂಟೆಗೆ ವಿಮಾನಗಳು ಟೇಕಾಫ್ ಆಗಲಿವೆ. ಕೊಚ್ಚಿಯಿಂದ ಬೆಂಗಳೂರಿಗೆ ಬರುವ ವಿಮಾನಗಳು ಬೆಳಿಗ್ಗೆ 10.25 ಮತ್ತು ಮಧ್ಯಾಹ್ನ 2.15ಕ್ಕೆ ಟೇಕಾಫ್ ಆಗಲಿವೆ.