Advertisement

ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ‘ಸೈದ್ಧಾಂತಿಕ ಬದಲಾವಣೆ’ ಅಗತ್ಯವಿದೆ: ಕೋಚ್ ರಮೇಶ್ ಪೊವಾರ್

03:39 PM Jul 15, 2021 | Team Udayavani |

ಲಂಡನ್: ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ಏಕದಿನ ಮತ್ತು ಟಿ20 ಎರಡೂ ಸರಣಿಯಲ್ಲಿ ಸೋಲನುಭವಿಸಿರುವ ಭಾರತ ತಂಡದಲ್ಲಿ ಸೈದ್ಧಾಂತಿಕ ಬದಲಾವಣೆಯ ಅಗತ್ಯವಿದೆ ಎಂದು ಕೋಚ್ ರಮೇಶ್ ಪೊವಾರ್ ಅಭಿಪ್ರಾಯಪಟ್ಟಿದ್ದಾರೆ.

Advertisement

ಆಟಗಾರರ ಮನಸ್ಥಿತಿಯಲ್ಲಿ ಬದಲಾವಣೆ ಆಗಬೇಕಿದೆ. ಇಲ್ಲವೇ ಮಧ್ಯ ಕ್ರಮಾಂಕದಲ್ಲಿ ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟ್ ಬೀಸಬಲ್ಲ ಆಟಗಾರರ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

“ಆಟಗಾರರು ಅಂಜಿಕೆ ಬಿಟ್ಟು ಆಡಬೇಕಿದೆ. ಇದು ನನ್ನ ಮೊದಲ ಸರಣಿ. ಹಾಗಾಗಿ ಈಗಲೇ ಈ ಬಗ್ಗೆ ಒತ್ತಡ ಹೇರಲಾಗದು. ಅವರು ಒಂದು ಯೋಜನೆಯ ಪ್ರಕಾರ ಆಡುತ್ತಿದ್ದಾರೆ. ಎಲ್ಲವನ್ನೂ ಬದಲಿಸಲು ಸಾಧ್ಯವಿಲ್ಲ. ಆದರೆ ಕೆಲವು ಬದಲಾವಣೆಗಳು ಅಗತ್ಯ” ಎಂದು ರಮೇಶ್ ಪೊವಾರ್ ಹೇಳಿದ್ದಾರೆ.

ಇದನ್ನೂ ಓದಿ:ರಿಷಭ್ ಪಂತ್ ಗೆ ಕೋವಿಡ್ ಪಾಸಿಟಿವ್: ಅಭ್ಯಾಸ ಪಂದ್ಯಕ್ಕಿಲ್ಲ ಡೆಲ್ಲಿ ಡ್ಯಾಶರ್

“ಮುಂದಿನ ವಿಶ್ವಕಪ್ ಒಳಗೆ ನಾವು ಉತ್ತಮ ಮಧ್ಯಮ ಕ್ರಮಾಂಕವನ್ನು ಪಡೆಯಲು ಒಂದು ಮಾರ್ಗವನ್ನು ಕಂಡುಕೊಳ್ಳಬೇಕಿದೆ. ಏಕದಿನ ಮಾದರಿಯಲ್ಲಿ ಸುಲಭವಾಗಿ 250 ರನ್ ಗಳಿಸಬೇಕು. ನಾಯಕಿ, ಉಪನಾಯಕಿ, ಆಯ್ಕೆದಾರರ ಜೊತೆ ಈ ಬಗ್ಗೆ ನಾವು ಚರ್ಚಿಸುತ್ತೇವೆ” ಎಂದು ಪೊವಾರ್ ಹೇಳಿದರು.

Advertisement

ಇಂಗ್ಲೆಂಡ್ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಡ್ರಾ ಸಾಧಿಸಿತ್ತು. ಏಕದಿನ ಮತ್ತು ಟಿ20 ಸರಣಿಯಲ್ಲಿ 2-1 ಅಂತರದಲ್ಲಿ ಸೋಲನುಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next