Advertisement

ಭಾರತದ ಸುದೀರ್ಘ‌ ದಾಖಲೆ

06:00 AM Aug 16, 2018 | Team Udayavani |

ಏಶ್ಯನ್‌ ಗೇಮ್ಸ್‌ನಲ್ಲಿ ಭಾರತದ ಸುದೀರ್ಘ‌ ದಾಖಲೆ ಯಾರ ಹೆಸರಲ್ಲಿದೆ? ಇದೊಂದು ಕೌತುಕದ ಪ್ರಶ್ನೆ. ಇದಕ್ಕೆ ಉತ್ತರವಾಗುವವರು ಟ್ರಿಪಲ್‌ ಜಂಪರ್‌ ಮೊಹಿಂದರ್‌ ಸಿಂಗ್‌. 1958ರ ಟೋಕಿಯೊ ಏಶ್ಯನ್‌ ಗೇಮ್ಸ್‌ನಲ್ಲಿ ಅವರು 15.62 ಮೀ. ಸಾಧನೆಯೊಂದಿಗೆ ಈ ದಾಖಲೆ ನಿರ್ಮಿಸಿದ್ದರು. 1962ರ ಏಶ್ಯಾಡ್‌ನ‌ಲ್ಲಿ ಈ ದಾಖಲೆಯನ್ನು ಯಾರೂ ಮುರಿಯಲಿಲ್ಲ. 1966ರಲ್ಲಿ ಇದನ್ನು ಮುರಿಯಲು ಮತ್ತೂಬ್ಬ “ಮೊಹಿಂದರ್‌’ ಬರಬೇಕಾಯಿತು. ಅವರೇ ಮೊಹಿಂದರ್‌ ಸಿಂಗ್‌ ಗಿಲ್‌. 16.11 ಮೀ. ಸಾಧನೆಯೊಂದಿಗೆ ಮೊಹಿಂದರ್‌ ಸಿಂಗ್‌ ಅವರ ದಾಖಲೆಯನ್ನು ಗಿಲ್‌ ಮುರಿದರು. ಸುದೀರ್ಘಾವಧಿಯ ಏಶ್ಯಾಡ್‌ ದಾಖಲೆ ಚೀನದ ವನಿತಾ ಲಾಂಗ್‌ಜಂಪರ್‌ ಯಾವೊ ವೀಲಿ ಹೆಸರಲ್ಲಿದೆ. 1994ರ ಹಿರೋಶಿಮಾ ಕೂಟದಲ್ಲಿ ವೀಲಿ 6.91 ಮೀ. ದೂರ ನೆಗೆದು ದಾಖಲೆ ನಿರ್ಮಿಸಿದ್ದರು. ಇದು ಇಂದಿಗೂ ಅಜೇಯವಾಗಿ ಉಳಿದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next