Advertisement

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

11:58 PM Apr 26, 2024 | Team Udayavani |

ಹೊಸದಿಲ್ಲಿ : ಜೂನ್‌ನಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ಭಾರ ತೀಯ ಕ್ರಿಕೆಟ್‌ನ ದಂತಕತೆ ಯುವರಾಜ್‌ ಸಿಂಗ್‌ ಅವರನ್ನು ರಾಯಭಾರಿಯನ್ನಾಗಿ ನೇಮಿಸ ಲಾಗಿದೆ. ಅವರು ಟೂರ್ನಿಯ ಪ್ರಚಾರ ರಾಯಭಾರಿಯಾಗಿರುತ್ತಾರೆ ಎಂದು ಐಸಿಸಿ ಘೋಷಿಸಿದೆ.

Advertisement

2007ರ ಮೊದಲ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಬೌಲರ್‌ ಸ್ಟುವರ್ಟ್‌ ಬ್ರಾಡ್‌ ಅವರ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ ಚಚ್ಚಿದ್ದ ಯುವರಾಜ್‌ ಸಿಂಗ್‌, ಅಮೆರಿಕದ ವಿಶ್ವಕಪ್‌ ಪ್ರಚಾರ ಕಾರ್ಯ ಕ್ರಮ ಗಳಲ್ಲಿ ಪಾಲ್ಗೊಳ್ಳ ಲಿದ್ದಾರೆ. ಇದರಲ್ಲಿ, ಜೂ. 9ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಭಾರತ- ಪಾಕಿಸ್ಥಾನ ನಡುವಿನ ಹೈವೋಲ್ಟೇಜ್ ಪಂದ್ಯದ ಪ್ರಚಾರವೂ ಸೇರಿದೆ ಎಂದು ಐಸಿಸಿ ಹೇಳಿದೆ.

ಈಗಾಗಲೇ ವೆಸ್ಟ್‌ ಇಂಡೀಸ್‌ನ ಕ್ರಿಕೆಟ್‌ ದೈತ್ಯ ಕ್ರಿಸ್‌ ಗೇಲ್‌ ಮತ್ತು ಜಮೈಕಾದ ಮಿಂಚಿನ ಓಟಗಾರ ಉಸೇನ್‌ ಬೋಲ್ಟ್ ಟಿ20 ವಿಶ್ವಕಪ್‌ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next