Advertisement

Deepfake video ವಿರುದ್ಧ ನಟ ರಣ್‌ವೀರ್‌ ಸಿಂಗ್‌ ದೂರು

12:55 AM Apr 23, 2024 | Team Udayavani |

ಮುಂಬಯಿ: ಇತ್ತೀಚೆಗೆ ವೈರಲ್‌ ಆಗಿದ್ದ ತಮ್ಮ ಡೀಪ್‌ಫೇಕ್‌ ವೀಡಿಯೋ ವಿರುದ್ಧ ಬಾಲಿವುಡ್‌ ನಟ ರಣ್‌ವೀರ್‌ ಸಿಂಗ್‌ ದೂರು ದಾಖಲಿಸಿದ್ದಾರೆ. ವಾರಾಣಸಿಗೆ ತೆರಳಿದ್ದಾಗ ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ್ದ ಸಂದರ್ಶನದ ನೈಜ ವೀಡಿಯೋಗೆ, ದುಷ್ಕರ್ಮಿ ಗಳು ಎ.ಐ. ಮೂಲಕ ಸೃಷ್ಟಿಸಲಾದ ಫೇಕ್‌ ಆಡಿಯೋ ಸೇರಿ ಸಿದ್ದಾರೆ ಎಂದು ನಟ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಸಿಂಗ್‌ ಅವರು ದೂರು ನೀಡಿದ್ದು, ಈಗಾಗಲೇ ಎಫ್ಐಆರ್‌ ದಾಖಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ. ವೈರಲ್‌ ಆದ ವೀಡಿಯೋದಲ್ಲಿ ಸಿಂಗ್‌ ಅವರು, ಆಡಳಿತಾರೂಢ ಕೇಂದ್ರ ಬಿಜೆಪಿ ಸರಕಾರವನ್ನು ಟೀಕಿಸಿ, ಕಾಂಗ್ರೆಸ್‌ಗೆ ಮತನೀಡಿ ಎಂದು ಮನವಿ ಮಾಡಿರುವಂತೆ ಬಿಂಬಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next