Advertisement

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

06:50 PM Apr 27, 2024 | Team Udayavani |

ಮುಂಬಯಿ: ʼಹನುಮಾನ್‌ʼ ಸಿನಿಮಾದ ಮೂಲಕ ಸದ್ದು ಮಾಡಿದ ನಿರ್ದೇಶಕ ಪ್ರಶಾಂತ್‌ ವರ್ಮಾ ಅವರ ಮುಂದಿನ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ.

Advertisement

ಪ್ರಶಾಂತ್‌ ವರ್ಮಾ ಬಾಲಿವುಡ್‌ ಚಿತ್ರರಂಗದ ಸ್ಟಾರ್‌ ನಟನೊಬ್ಬನ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತುಗಳು ಕಳೆದ ಕೆಲ ದಿನಗಳಿಂದ ಟಾಲಿವುಡ್‌ ವಲಯದಲ್ಲಿ ಹರಿದಾಡುತ್ತಿದೆ.

ಬಾಲಿವುಡ್‌ ನಟ ರಣ್ವೀರ್‌ ಸಿಂಗ್‌ ಜೊತೆ ʼಹನುಮಾನ್‌ʼ ನಿರ್ದೇಶಕ ಪ್ರಶಾಂತ್‌ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತುಗಳು ಹರಿದಾಡಿದೆ.

ಮೂಲಗಳ ಪ್ರಕಾರ ರಣ್ವೀರ್‌ ಸಿಂಗ್‌ ಕೂಡ ಪ್ರಶಾಂತ್‌ ಅವರೊಂದಿಗೆ ಕೆಲಸ ಮಾಡಲು ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ.

“ಈ ಬಗ್ಗೆ ರಣ್ವೀರ್‌ ಅವರೊಂದಿಗೆ ಪ್ರಶಾಂತ್‌ ಮಾತನಾಡಿದ್ದು, ಆರಂಭಿಕವಾಗಿ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ʼಹನುಮಾನ್‌ʼ ಬಳಿಕ ಅವರು ಇದೇ ಪ್ರಾಜೆಕ್ಟ್‌ ನಲ್ಲಿ ಕೆಲಸ ಮಾಡಲಿದ್ದಾರೆ. ಇದು ಬಹುತೇಕ ಖಚಿತವಾಗಿದೆ ಆದರೆ ಇನ್ನೂ ಯಾವುದನ್ನೂ ಅಂತಿಮಗೊಳಿಸಲಾಗಿಲ್ಲ. ಮೈತ್ರಿ ಮೂವಿ ಮೇಕರ್ಸ್‌ ಸಿನಿಮಾವನ್ನು ನಿರ್ಮಾಣ ಮಾಡಲಿದೆ” ಎಂದು ʼಹಿಂದೂಸ್ತಾನ್‌ ಟೈಮ್ಸ್‌ʼ ವರದಿ ತಿಳಿಸಿದೆ.

Advertisement

ಇತ್ತೀಚೆಗೆ ಪ್ರಶಾಂತ್‌ ವರ್ಮಾ ʼಹನುಮಾನ್‌ʼ ಸೀಕ್ವೆಲ್‌ ಎಂದೇ ಹೇಳಲಾಗುತ್ತಿರುವ ʼಜೈ ಹನುಮಾನ್‌ʼ ಸಿನಿಮಾದ ಸ್ಕ್ರಿಪ್ಟ್‌ ಪೂಜೆ ಮಾಡಿದ್ದರು. ಇದೇ ಸಿನಿಮಾದಲ್ಲಿ ರಣ್ವೀರ್‌ ನಟಿಸಲಿದ್ದಾರಾ ಅಥವಾ ಬೇರೆ ಸಿನಿಮಾದಲ್ಲಿ ನಟಿಸುತ್ತಾರೆಯೇ ಎನ್ನುವುದು ಇದುವರೆಗೆ ಅಧಿಕೃತವಾಗಿಲ್ಲ.

ʼಹನುಮಾನ್ʼ ಚಿತ್ರದಲ್ಲಿ ತೇಜ ಸಜ್ಜಾ, ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್‌ಕುಮಾರ್ ,ವಿನಯ್ ರೈ ಮುಖ್ಯ ಭೂಮಿಕೆಯಲ್ಲಿದ್ದರು. ಇದು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡಿತು.

Advertisement

Udayavani is now on Telegram. Click here to join our channel and stay updated with the latest news.

Next