Advertisement

ಕ್ಲೀವ್‌ಲ್ಯಾಂಡ್‌ ಟೆನಿಸ್‌ : ಪ್ರಶಸ್ತಿ ಹಂತಕ್ಕೆ ಸಾನಿಯಾ ಜೋಡಿ

10:44 PM Aug 28, 2021 | Team Udayavani |

ಕ್ಲೀವ್‌ಲ್ಯಾಂಡ್‌ (ಯುಎಸ್‌ಎ) : ಅಮೋಘ ಆಟವಾಡಿದ ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಕ್ರಿಸ್ಟಿನಾ ಮೆಕಾಲೆ “ಕ್ಲೀವ್‌ಲ್ಯಾಂಡ್‌ ಟೆನಿಸ್‌’ ಕೂಟದ ವನಿತಾ ಡಬಲ್ಸ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

Advertisement

ಸೆಮಿಫೈನಲ್‌ನಲ್ಲಿ ಇಂಡೋ-ಅಮೆರಿಕನ್‌ ಜೋಡಿ ಉಲ್ರಿಕ್‌ ಐಕೆರಿ (ನಾರ್ವೆ)-ಕ್ಯಾಥರಿನ್‌ ಹ್ಯಾರಿಸನ್‌ (ಅಮೆರಿಕ) ಜೋಡಿಯನ್ನು 7-6 (5), 6-2 ನೇರ ಸೆಟ್‌ಗಳಿಂದ ಕೆಡವಿತು. ಈ ಹೋರಾಟ ಒಂದು ಗಂಟೆ, 23 ನಿಮಿಷದ ವರಗೆ ಸಾಗಿತ್ತು.

ಫೈನಲ್‌ನಲ್ಲಿ ಶ್ರೇಯಾಂಕರಹಿತ ಸಾನಿಯಾ-ಮೆಕಾಲೆ ಅಗ್ರ ಶ್ರೇಯಾಂಕದ ಜಪಾನಿ ಜೋಡಿ ಶುಕೊ ಒಯಾಮಾ-ಎನಾ ಶಿಬಹಾರ ವಿರುದ್ಧ ಸೆಣಸಲಿದ್ದಾರೆ.

ಇದನ್ನೂ ಓದಿ :ಭಾರತೀಯ ಕುಸ್ತಿ ಫೆಡರೇಷನ್‌’ನೊಂದಿಗಿನ ಒಪ್ಪಂದ ಮುಂದುವರಿಸಿದ ಟಾಟಾ

Advertisement

Udayavani is now on Telegram. Click here to join our channel and stay updated with the latest news.

Next