Advertisement

ಇಟಲಿಯಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ಹಲ್ಲೆ

11:14 AM Oct 31, 2017 | udayavani editorial |

ಮಿಲಾನ್‌, ಇಟಲಿ : ಭಾರತೀಯ ವಿದ್ಯಾರ್ಥಿಗಳ ಮೇಲೆ ಇಲ್ಲಿ ಜನಾಂಗೀಯ ಹಲ್ಲೆ ನಡೆದಿರುವುದು ವರದಿಯಾಗಿದೆ. ಈ ಕಳವಳಕಾರಿ ವಿಷಯವನ್ನು ಮಿಲಾನ್‌ನಲ್ಲಿ ನ  ಭಾರತೀಯ ಕಾನ್ಸುಲೇಟ್‌ ಗೆ ತಿಳಿಸಲಾಗಿದೆ.

Advertisement

ವಿದೇಶ ವ್ಯವಹಾರ ಸಚಿವೆ ಸುಶ್ಮಾ ಸ್ವರಾಜ್‌ ಅವರು ಹಲ್ಲೆ ಘಟನೆ ಬಗ್ಗೆ ವರದಿಯನ್ನು ತರಿಸಿಕೊಂಡಿದ್ದು ತಾನು ಈ ವಿಷಯವನ್ನು ಖುದ್ದಾಗಿ ಅವಲೋಕಿಸುತ್ತಿದ್ದೇನೆ ಎಂದು ಹೇಳಿದ್ದಾರೆ. 

ಹಲ್ಲೆ ಘಟನೆಯ ಬಗ್ಗೆ  ಭಾರತೀಯ ವಿದ್ಯಾರ್ಥಿಗಳು ಭಯಪಡಬೇಕಾದ ಅಗತ್ಯವಿಲ್ಲ; ಈ ಕಳವಳಕಾರಿ ವಿದ್ಯಮಾನವನ್ನು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಿಡುವ ಇಟಲಿಯ ಉನ್ನತ ಮಟ್ಟದ ಗಮನಕ್ಕೆ ತರಲಾಗಿದೆ. 

ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ಹಲ್ಲೆ ನಡೆದಿರುವ ಸ್ಥಳಗಳಿಗೆ ಹೋಗದಂತೆ ಇತರ ಭಾರತೀಯ ವಿದ್ಯಾರ್ಥಿಗಳಿಗೂ ವಿಷಯವನ್ನು ತಿಳಿಸುವಂತೆ ಭಾರತೀಯ ದೂತಾವಾಸ ಭಾರತೀಯ ವಿದ್ಯಾರ್ಥಿಗಳನ್ನು ಕೋರಿದೆ. 

ಭಾರತೀಯ ವಿದ್ಯಾರ್ಥಿಗಳು ಪರಸ್ಪರರೊಂದಿಗೆ ಸಂಪರ್ಕದಲ್ಲಿರಬೇಕು; ಹಲ್ಲೆ ನಡೆದ ಸ್ಥಳಕ್ಕೆ ಹೋಗಕೂಡದು; ಘಟನೆಯಿಂದ ಯಾರೂ ವಿಚಲಿತರಾಗಬಾರದು; ಸೂಕ್ತ ಕಾನೂನು ಮತ್ತು ಶಿಸ್ತು ಕ್ರಮಕ್ಕೆ ಇಟಲಿಯ ಪೊಲೀಸ್‌ ಇಲಾಖೆಯ ಉನ್ನತಾಧಿಕಾರಿಗಳನ್ನು ಕೋರಲಾಗಿದೆ ಎಂದು ದೂತಾವಾಸ ಹೇಳಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next