Advertisement

ದೇಶದ ಈ ನಗರಗಳಲ್ಲಿ ಹೈಟೆಕ್ ವಿಮಾನ ನಿಲ್ದಾಣಗಳ ವಿನ್ಯಾಸದಂತೆ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ…

01:36 PM Mar 01, 2023 | |

ನವದೆಹಲಿ: ಭಾರತೀಯ ರೈಲ್ವೆ ಇದೀಗ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ರೈಲ್ವೆ ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳಂತೆ ಪುನರಾಭಿವೃದ್ಧಿಪಡಿಸಲು ಮುಂದಾಗಿದೆ. ಆ ನಿಟ್ಟಿನಲ್ಲಿ ಅಮೃತ್ ಭಾರತ್ ಯೋಜನೆಯಡಿ ದೇಶದಲ್ಲಿ ಆಯ್ದ ರೈಲ್ವೆ ನಿಲ್ದಾಣಗಳಿಗೆ ಆಧುನಿಕ ಸ್ಪರ್ಶ ನೀಡಲಿದ್ದು, ಪ್ರಮುಖ ರೈಲ್ವೆ ನಿಲ್ದಾಣಗಳ ಪ್ರಸ್ತಾವಿತ ವಿನ್ಯಾಸದ ಕಿರುನೋಟ ಇಲ್ಲಿದೆ…

Advertisement

ಇದನ್ನೂ ಓದಿ:ಸಿದ್ದರಾಮಯ್ಯ ಅವರೇ ನಾನು ನಿಮ್ಮಿಂದ ಆಡಳಿತ ಕಲಿಯಬೇಕಾಗಿಲ್ಲ: ಹೆಚ್‌ ಡಿಕೆ

ನವದೆಹಲಿ ರೈಲ್ವೆ ನಿಲ್ದಾಣ: 2022ರಲ್ಲಿ ಕೇಂದ್ರ ಸರ್ಕಾರ ನವದೆಹಲಿಯ ರೈಲ್ವೆ ನಿಲ್ದಾಣವನ್ನು ಅಂದಾಜು 4,700 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡುವುದಾಗಿ ಘೋಷಿಸಿತ್ತು. ರಾಷ್ಟ್ರರಾಜಧಾನಿ ನವದೆಹಲಿಯ ರೈಲ್ವೆ ನಿಲ್ದಾಣವು ಪ್ರತಿ ದಿನ ಸರಾಸರಿ 3.6 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುತ್ತಿದೆ.

ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ:

ಬೆಂಗಳೂರು ರಾಜಧಾನಿಯಲ್ಲಿ ಹಲವು ಪುನರಾಭಿವೃದ್ಧಿ ಯೋಜನೆಗಳಲ್ಲಿ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣವೂ ಸೇರಿದ್ದು, ಈ ನಿಟ್ಟಿನಲ್ಲಿ ಹಂತ, ಹಂತವಾಗಿ 480 ಕೋಟಿ ರೂ. ವೆಚ್ಚದಲ್ಲಿ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಪುನರ್ ಅಭಿವೃದ್ಧಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

Advertisement

ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಲ್: ಜನನಿಬಿಢ ಪ್ರದೇಶವಾಗಿರುವ ವಾಣಿಜ್ಯ ನಗರಿ ಮುಂಬೈಯ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣಕ್ಕೆ ಆಧುನಿಕ ಸ್ಪರ್ಶ ನೀಡಲು ಮುಂದಾಗಿದ್ದು, ಬರೋಬ್ಬರಿ 18,000 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ನಿಲ್ದಾಣ ಅಭಿವೃದ್ಧಿ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ.

ಅಹಮದಾಬಾದ್ ಜಂಕ್ಷನ್ ರೈಲ್ವೆ ನಿಲ್ದಾಣ:

ಗುಜರಾತ್ ನ ಪ್ರಮುಖ ಅಹಮದಾಬಾದ್ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿ ಕಾರ್ಯ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಆರಂಭಗೊಳ್ಳಲಿದ್ದು, ಇದೇ ರೀತಿ ಸಾಬರ್ ಮತಿ, ಗಾಂಧಿಗ್ರಾಮ್, ಮಣಿನಗರ್, ಚಂದ್ಲೋಡಿಯಾ ಮತ್ತು ಅಸರ್ವಾ ನಿಲ್ದಾಣಗಳನ್ನೂ ಪುನರಾಭಿವೃದ್ಧಿ ಮಾಡಲಾಗುವುದು ಎಂದು ವರದಿ ತಿಳಿಸಿದೆ.

ಚೆನ್ನೈ ಎಗ್ಮೋರ್ ರೈಲ್ವೆ ನಿಲ್ದಾಣ:

ದಕ್ಷಿಣ ಭಾರತದ ರೈಲ್ವೆ ವಲಯದಲ್ಲಿ ಎರಡನೇ ಅತೀ ದೊಡ್ಡ ರೈಲ್ವೆ ನಿಲ್ದಾಣವಾದ ಚೆನ್ನೈನ ಎಗ್ಮೋರ್ ರೈಲ್ವೆ ನಿಲ್ದಾಣವನ್ನು ಆಧುನಿಕ ಸೌಲಭ್ಯದೊಂದಿಗೆ ಅಂತಾರಾಷ್ಟ್ರೀಯ ದರ್ಜೆಗೆ ಏರಿಸಲು ಭಾರತೀಯ ರೈಲ್ವೆ ಮುಂದಾಗಿದೆ.

ಉದಯ್ ಪುರ್ ರೈಲ್ವೆ ನಿಲ್ದಾಣ:

ರಾಜಸ್ಥಾನದ ಉದಯ್ ಪುರ್ ರೈಲ್ವೆ ನಿಲ್ದಾಣವನ್ನು 354 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲು ಅನುದಾನ ಬಿಡುಗಡೆ ಮಾಡಲಾಗಿದ್ದು, ಐದು ಹಂತಗಳಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಕೆಲಸವನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next