Advertisement

ಭಾರತೀಯ ರೈಲ್ವೆಯಿಂದ ಜೂ. 21ರಿಂದ “ಶ್ರೀ ರಾಮಾಯಣ ಯಾತ್ರೆ’

01:00 AM May 26, 2022 | Team Udayavani |

ಹೊಸದಿಲ್ಲಿ: ಭಾರತೀಯ ರೈಲ್ವೇಯ ಐಆರ್‌ಸಿಟಿಸಿ ನಡೆಸುವ “ಶ್ರೀ ರಾಮಾಯಣ ಯಾತ್ರೆ’ ಜೂ.21ರಂದು ಆರಂಭವಾಗಲಿದೆ.

Advertisement

ರಾಮನ ಜೀವನದಲ್ಲಿ ಬರುವ ಎಲ್ಲ ಪ್ರಮುಖ ಕ್ಷೇತ್ರಗಳ ಸುತ್ತಾಟವನ್ನು ಈ ಯಾತ್ರೆಯಲ್ಲಿ ಮಾಡಬಹುದಾಗಿದೆ. ಯಾತ್ರೆಗೆ ಭಕ್ತರನ್ನು ಕರೆದೊಯ್ಯುವ “ಭಾರತ್‌ ಗೌರವ್‌ ಪ್ರವಾಸಿ ರೈಲು’ ಜೂ.21ರಂದು ದಿಲ್ಲಿಯ ಸಫ‌ªರ್‌ಜುಂಗ್‌ ರೈಲ್ವೇ ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ.

ಒಟ್ಟು 18 ದಿನಗಳ ಕಾಲ ಅಯೋಧ್ಯೆ, ಜಾನಕಪುರ (ನೇಪಾಲ), ಸೀತಾಮಹಿì, ಬುಕ್ಸಾರ್‌, ವಾರಾಣಸಿ, ಪ್ರಯಾಗ್‌ರಾಜ್‌, ಶೃಂಗವೇರಪುರ, ಚಿತ್ರಕೂಟ, ನಾಸಿಕ್‌, ಹಂಪಿ, ರಾಮೇಶ್ವರ, ಕಾಂಚಿಪುರಂ ಮತ್ತು ಭದ್ರಾಚಲಂ ಸುತ್ತಲಿದೆ.

ಒಟ್ಟು 8000 ಕಿ.ಮೀ ಪ್ರಯಾಣಿಸುವ ಈ ಯಾತ್ರೆಗೆ ಭಕ್ತರು 71,820 ರೂ. ಪಾವತಿಸಿ ಟಿಕೆಟ್‌ ಕಾದಿರಿಸಿಕೊಳ್ಳಬಹುದು. ಜೋಡಿಯಾಗಿ ಟಿಕೆಟ್‌ ಬುಕ್ಕಿಂಗ್‌ ಮಾಡುವವರಿಗೆ ಒಂದು ಟಿಕೆಟ್‌ ಬೆಲೆ 62,370 ರೂ. ನಿಗದಿಪಡಿಸಲಾಗಿದೆ. 5-11 ವರ್ಷದ ಮಕ್ಕಳಿಗೆ ಟಿಕೆಟ್‌ ದರ 56,700 ರೂ. ಆಗಿದೆ. 11 ಥರ್ಡ್‌ ಕ್ಲಾಸ್‌ ಎಸಿ ಬೋಗಿಗಳು ರೈಲಿನಲ್ಲಿರಲಿದ್ದು, ಒಟ್ಟು 600 ಭಕ್ತರಿಗೆ ಪ್ರಯಾಣಕ್ಕೆ ಅವಕಾಶವಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next