Advertisement

ಹುತಾತ್ಮ ಯೋಧರಿಗೆ ಟೀಂ ಇಂಡಿಯಾ ಸ್ಪೆಷಲ್ ‘ಕ್ಯಾಪ್’ ಗೌರವ

07:55 AM Mar 08, 2019 | Team Udayavani |

ರಾಂಚಿ: ಪ್ರವಾಸಿ ಆಸೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯ ಆಡಲಿಳಿದ ಭಾರತ ತಂಡ ಇತ್ತೀಚೆಗೆ ಪುಲ್ವಾಮಾ ದಾಳಿಯಲ್ಲಿ ಅಗಲಿದ ಭಾರತೀಯ ಯೋಧರಿಗೆ ವಿಶೇಷ ಗೌರವ ಸಲ್ಲಿಸಿದೆ. ಈ ಪಂದ್ಯದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ‘ಆರ್ಮಿ ಕ್ಯಾಪ್’ ಧರಿಸಿ ಭಾರತ ತಂಡ ಆಡಲಿದೆ. 

Advertisement

ಟಾಸ್ ಗೆದ್ದು ಮಾತನಾಡಿದ ಭಾರತ ತಂಡದ ನಾಯಕ ಕೊಹ್ಲಿ, ನಾವು ಈ ಕ್ಯಾಪ್ ಮೂಲಕ ಭಾರತೀಯ ಯೋಧರಿಗೆ ವಿಶೇಷ ಗೌರವ ಸಲ್ಲಿಸುತ್ತೇವೆ. ಮತ್ತು ಈ ಪಂದ್ಯದ ಸಂಭಾವನೆಯನ್ನು ಪುಲ್ವಾಮಾ ದಾಳಿಯಲ್ಲಿ ಅಗಲಿದ ಕುಟುಂಬದವರಿಗೆ ನೀಡುತ್ತೇವೆ ಎಂದರು. 

ತನ್ನ ತವರು ನೆಲದಲ್ಲಿ ಆಡುತ್ತಿರುವ ಮಹೇಂದ್ರ ಸಿಗ್ ಧೋನಿ ಎಲ್ಲಾ ಆಟಗಾರರಿಗೆ ಈ ಕ್ಯಾಪ್ ನೀಡಿದರು. 

ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿದೆ. ಭಾರತ ತಂಡ ಈ ಪಂದ್ಯಕ್ಕೆ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸಿದೆ. ಆಸೀಸ್ ಒಂದು ಬದಲಾವಣೆ ಮಾಡಿಕೊಂಡಿದೆ. ನಥನ್ ಕೌಲ್ಟರ್ ನೈಲ್ ಬದಲಿಗೆ ಜೇ ರಿಚರ್ಡ್ಸನ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next