ಶಾರ್ಜಾ: ಮಾರಣಾಂತಿಕ ಹಲ್ಲೆಗೊಳಗಾದ ಪತ್ನಿಯು, ಜಾಲತಾಣಗಳ ಮೂಲಕ ಅವಲತ್ತುಕೊಂಡ ಬೆನ್ನಲ್ಲೇ ಪತಿಯನ್ನು ಬಂಧಿಸಿದ ಘಟನೆ ದುಬೈನ ಶಾರ್ಜಾದಲ್ಲಿ ನಡೆದಿದೆ.
ಶಾರ್ಜಾ ನಿವಾಸಿ ಜಾಸ್ಮೈನ್ ಸುಲ್ತಾನ್ (33) ತನ್ನ ಭಾರತೀಯ ಮೂಲದ ಪತಿ ಮೊಹಮದ್ ಖೀಜಾರ್ ಉಲ್ಲಾಲ್‌ನಿಂದ ತೀವ್ರ ಹಲ್ಲೆಗೊಳಗಾಗಿದ್ದರು. ಕಣ್ಣುಗಳಲ್ಲಿ ರಕ್ತ ಸೋರುತ್ತಿತ್ತು. ಮುಖ ಬಾತುಕೊಂಡಿತ್ತು. ಇನ್ನು ಬದುಕುವುದೇ ಇಲ್ಲ ಎನ್ನುವ ಸ್ಥಿತಿ ತಲುಪಿದ್ದರು.
ಇಂತಹ ಪರಿಸ್ಥಿತಿಯಲ್ಲಿ ಟ್ವಿಟರ್ ಮೊರೆ ಹೋದ ಜಾಸ್ಮೈನ್, ತಾನು ಹಲ್ಲೆಗೊಳಗಾದ ದೃಶ್ಯಾವಳಿಗಳನ್ನು ಹಂಚಿಕೊಂಡು, ತುರ್ತು ನೆರವಿಗೆ ಧಾವಿಸಿ ಎಂದು ಅಳಲು ತೋಡಿಕೊಂಡಿದ್ದರು. ಜೊತೆಗೆ ತಮಗೆ ಇಬ್ಬರು ಚಿಕ್ಕ ಮಕ್ಕಳಿದ್ದು, ಪಾಸ್‌ಪೋರ್ಟ್ ಮತ್ತು ಒಡವೆಗಳನ್ನು ಪತಿ ಕದ್ದಿದ್ದಾರೆ ಎಂದೂ ದೂರಿದ್ದರು. ಈ ದೃಶ್ಯಗಳು ವೈರಲ್ ಆಗಿದ್ದು, 37 ಸಾವಿರ ಮಂದಿ ಪ್ರತಿಕ್ರಿಯಿಸಿ, ಅರಬ್‌ನ ಭದ್ರತಾ ಸಂಸ್ಥೆಗಳ ಗಮನ ಸೆಳೆದಿದ್ದರು. ಕೂಡಲೇ ಆಕೆಯ ಪತಿಯನ್ನು ಬಂಧಿಸಲಾಗಿದೆ. ಈ ಕುರಿತು ಅರಬ್‌ನ ಭಾರತೀಯ ರಾಯಭಾರಿ ಕಚೇರಿ ಕೂಡ ಪ್ರತಿಕ್ರಿಯಿಸಿದ್ದು, ಸಂತ್ರಸ್ತೆಯ ನೆರವಿಗೆ ನಿಲ್ಲುವುದಾಗಿ ತಿಳಿಸಿದೆ.