Advertisement
ಗುರುವಾರ ಪ್ರಯಾಗ್‌ರಾಜ್‌ನ ಸಂಗಮ ಪ್ರದೇಶ ದಲ್ಲಿ ಸತತ ಐದು ಗಂಟೆಗಳ ಕಾಲ ಪರಿಶೀಲನೆ ನಡೆಸಿದ ಅವರು ಕುಂಭಮೇಳದ ಅಖಾಡದಲ್ಲಿ ಖುದ್ದು ಯೋಗಿಗಳಂತೆ ಓಡಾಡಿ ಸಂತರಿಂದ ಮಾಹಿತಿ ಪಡೆದಿ¨ªಾರೆ. ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಹಾಗೂ ಸಂಪುಟ ಸಹೋದ್ಯೋಗಿಗಳ ಜತೆಗೆ ಪ್ರಯಾಗ್‌ರಾಜ್‌ನಲ್ಲಿ ಬೀಡುಬಿಟ್ಟಿರುವ ಆದಿತ್ಯನಾಥ, ವಿಶ್ವದ ಅತೀ ದೊಡ್ಡ ಧಾರ್ಮಿಕ ಸಂಗಮದ ಸಿದ್ಧತೆಗಳಿಗೆ ಸಾಕ್ಷಿಯಾಗಿ¨ªಾರೆ.
Related Articles
Advertisement
ಎಐ ತಂತ್ರಜ್ಞಾನಈ ಬಾರಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ತಂತ್ರಜ್ಞಾನವನ್ನು ಅತ್ಯಂತ ವ್ಯವಸ್ಥಿತವಾಗಿ ಬಳಸಿಕೊಳ್ಳಲಾಗುವುದು. ಇದನ್ನು ಡಿಜಿಟಲ್ ಕುಂಭ ಎಂದು ಘೋಷಣೆ ಮಾಡಿರುವುದರಿಂದ ದೇಶ- ವಿದೇಶದ ಶ್ರದ್ಧಾಳುಗಳು ಮನೆಯಲ್ಲೇ ಕುಳಿತು ಎಲ್ಲವನ್ನೂ ವೀಕ್ಷಣೆ ಮಾಡಬಹುದಾಗಿದೆ. ಜತೆಗೆ ಆ್ಯಂಟಿ ಡ್ರೋನ್ ಸಿಸ್ಟಮ್, ಸಿಸಿಟಿವಿ ವ್ಯವಸ್ಥೆ ಮಾಡಲಾಗಿದೆ. ಮಹಾಕುಂಭ ಮೇಳ ಪ್ರಯಾಗರಾಜ್‌ಗೆ ಅದ್ಭುತ, ಅಲೌಕಿಕ, ಅಕಲ್ಪನೀಯ ಮೆರುಗನ್ನು ನೀಡಿದೆ. ಇನ್ನು ಮುಂದೆ ಪ್ರಯಾಗ್‌ರಾಜ್ ವರ್ಷಪೂರ್ತಿ ಇದೇ ಸಂಭ್ರಮದಿಂದ ಭಕ್ತರು, ಶ್ರದ್ಧಾಳುಗಳನ್ನು ಕೈ ಬೀಸಿ ಕರೆಯುವಂತೆ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದರು. 3,000ಕ್ಕೂ ಅಧಿಕ ವಿಶೇಷ ರೈಲುಗಳು ದೇಶದ ನಾನಾ ಭಾಗಗಳಿಂದ ಇಲ್ಲಿಗೆ ಆಗಮಿಸುತ್ತಿದ್ದು, ಸ್ವಚ್ಚ, ಸುರಕ್ಷಿತ ಕುಂಭ ನಮ್ಮ ಆದ್ಯತೆ ಎಂದು ತಿಳಿಸಿದರು. ಮಹಾಕುಂಭದಲ್ಲಿ ಆ್ಯಪಲ್ ಸಹಸ್ಥಾಪಕನ ಪತ್ನಿ ವ್ರತ!
ಈ ಕುಂಭಮೇಳನದಲ್ಲಿ ಆ್ಯಪಲ್ ಕಂಪೆನಿ ಸಹಸ್ಥಾಪಕ ಮತ್ತು ಮಾಜಿ ಸಿಇಒ ಸ್ಟೀವ್ ಜಾಬ್ಸ್ ಅವರ ಪತ್ನಿ, ಜಗತ್ತಿನ ಅತೀ ಶ್ರೀಮತ ಮಹಿಳೆಯರಲ್ಲಿ ಒಬ್ಬರಾದ ಲಾರೀನ್ ಪೋವೆಲ್ ಜಾಬ್ಸ್ ಕೂಡ ಭಾಗಿಯಾಗಲಿದ್ದಾರೆ. ವಿಧವೆ ಲಾರೀನ್ ಪ್ರಯಾಗ್‌ರಾಜ್‌ಗೆ ಆಗಮಿಸಿ ನಿರಂಜನಿ ಅಖಾಡದ ಸ್ವಾಮಿ ಕೈಲಾಸಾನಂದ ಅವರ ಶಿಬಿರದಲ್ಲಿ ತಂಗಿ, ಕಲ್ಪವಾಸ್ ವ್ರತ ಕೈಗೊಳ್ಳಲಿದ್ದಾರೆ. ಜ.29ರ ವರೆಗೆ ಅವರು ಇಲ್ಲೇ ಉಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏನಿದು ಕಲ್ಪವಾಸ್?: ಶರೀರ ಮತ್ತು ಮನಸ್ಸನ್ನು ಶುದ್ಧೀಕರಿಸಿ ಅಧ್ಯಾತ್ಮ ಜ್ಞಾನ ಗಳಿಸಲು ಕೈಗೊಳ್ಳುವ ವ್ರತ. ಪುಷ್ಯ ಪೂರ್ಣಿಮೆಯಿಂದ ಆರಂಭವಾಗಿ ಮಾಘ ಪೂರ್ಣಿಮೆಯವರೆಗೆ ಅಂದರೆ 1 ತಿಂಗಳ ಕಾಲ ಈ ವ್ರತ ಮಾಡಲಾಗುತ್ತದೆ. ಇದನ್ನು ಕೈಗೊಳ್ಳುವವರನ್ನು “ಕಲ್ಪವಾಸೀಸ್’ ಎಂದು ಕರೆಯುತ್ತಾರೆ. ಮಾಲಿನ್ಯ ತಡೆಗೆ ಜಪಾನ್‌ತಂತ್ರಜ್ಞಾನದಲ್ಲಿ ಅರಣ್ಯ
ವಾಯುಮಾಲಿನ್ಯ ತಗ್ಗಿಸಿ ಶುದ್ಧ ಆಮ್ಲಜನಕವನ್ನು ಪ್ರಯಾಗರಾಜ್‌ಗೆ ನೀಡುವುದಕ್ಕಾಗಿ ಸಿಎಂ ಯೋಗಿ ಆದಿತ್ಯನಾಥ್ ನಿರ್ದೇಶನದ ಮೇರೆಗೆ ಜಪಾನಿನ ಮಿಯಾವಾಕಿ ತಂತ್ರಜ್ಞಾನ ಆಧರಿಸಿ ಕೇವಲ ಎರಡೇ ವರ್ಷದಲ್ಲಿ ಪುಟ್ಟ ಪುಟ್ಟ ತಳಿಯ ಗಿಡಗಳಿಂದ ಕೂಡಿದ 55ಗಿ 800 ಚ.ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ದೊಡ್ಡ ವನ ಬೆಳೆಸಲಾಗಿದೆ. 2019ರ ಕುಂಭ ಮೇಳದ ಸಂದರ್ಭದಲ್ಲಿ ವಾಯುಮಾಲಿನ್ಯ ಸಮಸ್ಯೆ ತೀವ್ರಗೊಂಡ ವರದಿ ಹಿನ್ನೆಲೆಯಲ್ಲಿ ಈ ವನ ಮಹೋತ್ಸವಕ್ಕೆ ಕಂಕಣ ಕಟ್ಟಲಾಗಿತ್ತಂತೆ. ಅಲಹಾಬಾದ್ ವಿವಿಯ ಡಾ| ಎನ್.ಬಿ.ಸಿಂಗ್ ನಿರ್ದೇಶನದಲ್ಲಿ ಈ ವನ ನಿರ್ಮಾಣ 2020-21 ರಲ್ಲಿ ಪ್ರಾರಂಭವಾಗಿತ್ತು. 63 ಜಾತಿಯ 1.19 ಲಕ್ಷ ಗಿಡಗಳನ್ನು ನೆಡಲಾಗಿದ್ದು ಅವು ಈಗ 10-12 ಅಡಿ ಎತ್ತರಕ್ಕೆ ಬೆಳೆದಿದೆ. ಮಾವು, ಬೇವು, ಹುಣಸೆ, ತೇಗ, ತುಳಸಿ, ನೆಲ್ಲಿ, ಕದಂಬ ಇತ್ಯಾದಿ ತಳಿ ಇಲ್ಲಿ ರಾರಾಜಿಸುತ್ತಿವೆ. ರಾಘವೇಂದ್ರ ಭಟ್