Advertisement

ಪಾಕ್‌ ಸ್ವಾತಂತ್ರ್ಯ ದಿನ ಭಾರತೀಯ ಹ್ಯಾಕರ್‌ಗಳಿಂದ ವೆಬ್‌ಸೈಟ್‌ ಹ್ಯಾಕ್

11:19 AM Aug 15, 2017 | udayavani editorial |

ಹೊಸದಿಲ್ಲಿ : ಪಾಕಿಸ್ಥಾನದ ಸ್ವಾತಂತ್ರ್ಯ ದಿನವಾದ ಆ.14ರಂದು ಭಾರತೀಯ ಹ್ಯಾಕರ್‌ಗಳು ಪಾಕ್‌ ಸರಕಾರದ ಕೆಲವೊಂದು ಪ್ರಮುಖ ವೆಬ್‌ಸೈಟ್‌ಗಳು ಸೇರಿದಂತೆ ಸುಮಾರು 500ಕ್ಕೂ ಅಧಿಕ ವೆಬ್‌ ಸೈಟ್‌ಗಳನ್ನು  ಹ್ಯಾಕ್‌ ಮಾಡಿ, ವಿರೂಪ ಗೊಳಿಸಿ ಭಾರತ ಪರ ವಿಷಯಗಳನ್ನು ಅವುಗಳಲ್ಲಿ ತುಂಬಿದ್ದಾರೆ. 

Advertisement

ಪಾಕ್‌ ಸರಕಾರದ ಮುಖ್ಯ ವೆಬ್‌ಸೈಟ್‌ಗಳಲ್ಲಿ  ರಕ್ಷಣಾ ಸಚಿವಾಲಯ, ಹವಾಮಾನ ಬದಲಾವಣೆ ಸಚಿವಾಲಯ, ಅಂತರ್‌ ಪ್ರಾಂತೀಯ ಸಂಚಾಲನ ಸಚಿವಾಲಯ, ನೀರು ಮತ್ತು ವಿದ್ಯುತ್‌ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಇನ್ನೂ ಕೆಲವು ವೆಬ್‌ ಸೈಟ್‌ಗಳು ಭಾರತೀಯ ಹ್ಯಾಕರ್‌ಗಳ ಕೃತ್ಯದಿಂದ ತೀವ್ರವಾಗಿ ಬಾಧಿತವಾಗಿವೆ ಎಂದು ವರದಿಯಾಗಿದೆ. 

ಕೆಲವೊಂದು ವೆಬ್‌ ಸೈಟ್‌ಗಳು ಇನ್ನೂ ಹ್ಯಾಕ್‌ ಆದ ಸ್ಥಿತಿಯಲ್ಲೇ ಇದ್ದು ಅವುಗಳಲ್ಲಿ  “ವೆಬ್‌ಸೈಟ್‌ ದುರಸ್ತಿಯಲ್ಲಿದೆ; ಬೇಗನೆ ಮರಳುತ್ತೇವೆ; ಅನನುಕೂಲತೆಗೆ ಕ್ಷಮೆ ಇರಲಿ’ ಎಂಬ ಬರಹ ಕಾಣಿಸಿಕೊಳ್ಳುತ್ತಿದೆ. 

“ಲೂಲುಸೆಕ್‌ ಇಂಡಿಯಾ’ ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಿರುವ ಹ್ಯಾಕರ್‌ ಸಮೂಹ ಈ ಕೃತ್ಯ ಎಸಗಿರುವುದಾಗಿ ಪಾಕ್‌ ಮಾಹಿತಿ ತಂತ್ರಜ್ಞಾನದ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಪಾಕ್‌ ಸರಕಾರ ಈಗಿನ್ನೂ ಈ ಹ್ಯಾಕಿಂಗ್‌ ಬಗ್ಗೆ ಅಧಿಕೃತ ಹೇಳಿಕೆಯನ್ನು ಕೊಡಬೇಕಾಗಿದೆ. 

Advertisement

ಭಾರತೀಯ ಹ್ಯಾಕರ್‌ಗಳು ಪಾಕ್‌ ಸರಕಾರದ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡುತ್ತಿರುವುದು ಇದೇ ಮೊದಲ ಸಲ ಅಲ್ಲ. 2016ರ ಅಕ್ಟೋಬರ್‌ನಲ್ಲಿ ಭಾರತೀಯ ಹ್ಯಾಕರ್‌ಗಳು ಪಾಕ್‌ ಸರಕಾರದ ಕಂಪ್ಯೂಟರ್‌ ಜಾಲದ ಕೆಲವೊಂದು ಮುಖ್ಯ ಕಂಪ್ಯೂಟರ್‌ಗಳನ್ನು ಹ್ಯಾಕ್‌ ಮಾಡಿದ್ದರು. ಅದೇ ರೀತಿ ಈ ವರ್ಷದ ಆದಿಯಲ್ಲಿ ಪಾಕ್‌ ಹ್ಯಾಕರ್‌ಗಳು ಭಾರತದ ಕೆಲವೊಂದು ಉನ್ನತ ಶಿಕ್ಷಣ ಸಂಸ್ಥೆಗಳ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next