ನವದೆಹಲಿ: 77ನೇ ಕೇನ್ಸ್ ಚಲನಚಿತ್ರೋತ್ಸವದ ಕೊನೆಯ ದಿನ ಭಾರತೀಯ ಸಿನಿಮಾವೊಂದು ಪ್ರತಿಷ್ಠಿತ ಪ್ರಶಸ್ತಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ಬರೆದಿದೆ.
ಪಾಯಲ್ ಕಪಾಡಿಯಾ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಇತಿಹಾಸವನ್ನು ನಿರ್ಮಿಸಿದ್ದಾರೆ. ಪಾಮ್ ಡಿ’ಓರ್ ನಂತರ ಎರಡನೇ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಗ್ರ್ಯಾಂಡ್ ಪ್ರಿಕ್ಸ್ ನ್ನು ಗೆದ್ದ ಮೊದಲ ಭಾರತೀಯ ನಿರ್ದೇಶಕರಾಗಿದ್ದಾರೆ.
ಪಾಯಲ್ ನಿರ್ದೇಶನ ಮಾಡಿರುವ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಸಿನಿಮಾ ಈ ಪ್ರಶಸ್ತಿಯನ್ನು ಗೆದ್ದಿದೆ. ಪ್ರಶಸ್ತಿಯನ್ನು ಪಾಯಲ್ ಹಾಗೂ ಚಿತ್ರದ ನಟಿಯರು ಸೀಕ್ವರಿಸಿದ್ದಾರೆ.
ಪಾಯಲ್ ಕಪಾಡಿಯಾ ನಿರ್ದೇಶಿಸಿದ ಈ ಸಿನಿಮಾ 30 ವರ್ಷಗಳ ಬಳಿಕ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿಗಾಗಿ ಸ್ಪರ್ಧಿಸಿದ ಮೊದಲ ಭಾರತೀಯ ಚಲನಚಿತ್ರ ಇದಾಗಿತ್ತು.
ಮೇ 23 ರಂದು ‘ಸ್ಪರ್ಧೆ ವಿಭಾಗ’ದಲ್ಲಿ ಸಿನಿಮಾ ಪ್ರದರ್ಶನ ಕಂಡಿತ್ತು.
ಹಿಂದಿ ಹಾಗೂ ಮಲಯಾಳಂನಲ್ಲಿರುವ ಈ ಸಿನಿಮಾದಲ್ಲಿ ಕಣಿ ಕುಸೃತಿ,ದಿವ್ಯ ಪ್ರಭಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ವಿಚ್ಛೇದಿತ ಮಹಿಳೆ ಹಾಗೂ ಅವರ ಸ್ನೇಹಿತ ನಡುವೆ ನಡೆಯುವ ಕಥೆಯನ್ನು ಸಿನಿಮಾ ಒಳಗೊಂಡಿದೆ.