ಮುಂಬಯಿ: ಪ್ರತಿ ವರ್ಷದಂತೆ ಈ ವರ್ಷವೂ ಬಣ್ಣದ ಲೋಕದಲ್ಲಿ ಹಲವು ಸಿನಿಮಾಗಳು, ವೆಬ್ ಸರಣಿಗಳು ರಿಲೀಸ್ ಆಗಿದೆ. ಐಎಂಡಿಬಿ (Internet Movie Database) 2024ರ ವರ್ಷದಲ್ಲಿ ಅತೀ ಹೆಚ್ಚು ಗಮನ ಸೆಳೆದ ಕಲಾವಿದರ ಪಟ್ಟಿಯನ್ನು ರಿವೀಲ್ ಮಾಡಿದೆ.
ಐಎಂಡಿಬಿಯ ಮೋಸ್ಟ್ ಪಾಪ್ಯುಲರ್ ಇಂಡಿಯನ್ ಸ್ಟಾರ್ಸ್ ಪಟ್ಟಿಯಲ್ಲಿ ಬಾಲಿವುಡ್ ಹಾಗೂ ಸೌತ್ ಸಿನಿರಂಗದ ಖ್ಯಾತ ಕಲಾವಿದರು ಕಾಣಿಸಿಕೊಂಡಿದ್ದಾರೆ.
ಮೊದಲ ಸ್ಥಾನದಲ್ಲಿ ಬಾಲಿವುಡ್ ಬ್ಯೂಟಿ ʼಅನಿಮಲ್ʼ ಬೆಡಗಿ ತೃಪ್ತಿ ದಿಮ್ರಿ(Triptii Dimri) ಕಾಣಿಸಿಕೊಂಡಿದ್ದಾರೆ. ತೃಪ್ತಿ ಅವರಿಗೆ 2024 ಗೋಲ್ಡನ್ ಇಯರ್ ಎಂದರೆ ತಪ್ಪಾಗದು. ʼಅನಿಮಲ್ʼ ನಿಂದ ಶುರುವಾದ ಅವರ ಈ ವರ್ಷದ ಸಿನಿ ಜರ್ನಿ ʼಬ್ಯಾಡ್ ನ್ಯೂಸ್ʼ, ʼವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋʼ, ʼಭೂಲ್ ಭುಲೈಯಾ 3ʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗಳ ಅವರು ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ.
ಹಾಗಾಗಿ ಅವರು ಐಎಂಡಿಬಿಯ ಮೋಸ್ಟ್ ಪಾಪ್ಯುಲರ್ ಇಂಡಿಯನ್ ಸ್ಟಾರ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಎರಡನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆ (Deepika Padukone) ಕಾಣಿಸಿಕೊಂಡಿದ್ದಾರೆ. ಈ ವರ್ಷ ದೀಪಿಕಾ ಅವರಿಗೆ ಸಿಕ್ಕಿರುವ ಮೂರು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ವರ್ಷದ ಆರಂಭದಲ್ಲಿ ʼಫೈಟರ್ʼ, ಕಲ್ಕಿ 2898 ಎಡಿʼ ಹಾಗೂ ʼಸಿಂಗಂ ಎಗೇನ್ʼನಲ್ಲಿ ದೀಪಿಕಾ ನಟಿಸಿ ಗಮನ ಸೆಳೆದಿದ್ದಾರೆ.
ತಾಯಿಯಾದ ಬಳಿಕವೂ ದೀಪಿಕಾ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಕೊಂಡಿದ್ದಾರೆ.
ʼದಿ ಪರ್ಫೆಕ್ಟ್ ಕಪಲ್ʼ ವೆಬ್ ಸಿರೀಸ್‌ನಿಂದ ಗಮನ ಸೆಳೆದ ಇಶಾನ್ ಖಟ್ಟರ್ (Ishaan Khatter) ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವರ್ಷ ಯಾವ ಸಿನಿಮಾ ರಿಲೀಸ್ ಆಗದೆ ಇದ್ರು ಶಾರುಖ್ ಖಾನ್ (Shah Rukh Khan) ತಮ್ಮ ಸ್ಟಾರ್ ಡಮ್ ಕಮ್ಮಿಯಾಗಿಲ್ಲ. ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ.
ʼಮಂಕಿ ಮ್ಯಾನ್ʼ ಮೂಲಕ ಈ ವರ್ಷ ಹಾಲಿವುಡ್‌ಗೆ ಎಂಟ್ರಿ ಕೊಟ್ಟ ಶೋಭಿತಾ ಧೂಳಿಪಾಲ (Sobhita Dhulipala) 5ನೇ ಸ್ಥಾನದಲ್ಲಿದ್ದಾರೆ.
IMDb 2024 ರ ಟಾಪ್ 10 ಅತ್ಯಂತ ಜನಪ್ರಿಯ ಭಾರತೀಯ ತಾರೆಗಳು:
ತೃಪ್ತಿ ದಿಮ್ರಿ
ದೀಪಿಕಾ ಪಡುಕೋಣೆ
ಇಶಾನ್ ಖಟ್ಟರ್
ಶಾರುಖ್ ಖಾನ್
ಶೋಭಿತಾ ಧೂಳಿಪಾಲ
ಶಾರ್ವರಿ
ಐಶ್ವರ್ಯಾ ರೈ ಬಚ್ಚನ್
ಸಮಂತಾ
ಆಲಿಯಾ ಭಟ್
ಪ್ರಭಾಸ್