Advertisement
ಕನಿಷ್ಠ ತಾಪಮಾನವು ಮೈನಸ್‌ಗೆ ತಲುಪಿರುವ ನಡುವೆಯೇ, 90 ಯೋಧರ ತಂಡ 60 ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಿದೆ. ಇದರಲ್ಲಿ 800ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ನೀಡಿದ್ದು,10 ಪ್ರಮುಖ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲಾಗಿದೆ. ಭಾರತೀಯ ವೈದ್ಯರ ಪರಿಶ್ರಮಕ್ಕೆ ಟರ್ಕಿ ಜನರು ಧನ್ಯವಾದ ಅರ್ಪಿಸಿ, ನೀವು ನಮ್ಮ ಭರವಸೆ ಎಂದು ಭಾವುಕರಾಗಿದ್ದಾರೆ.
ಭಾರತದಿಂದ ಪರಿಹಾರ ಸಾಮ್ರಾಗಿ ಹೊತ್ತ 7ನೇ ವಿಮಾನ ಭಾನುವಾರ ಟರ್ಕಿ ತಲುಪಿದೆ. ಇದರಲ್ಲಿ 13 ಟನ್ ವೈದ್ಯಕೀಯ ನೆರವು, ಹೊದಿಕೆಗಳು, ವೆಂಟಿಲೇಟರ್‌ಗಳು ಸೇರಿ 24 ಟನ್ ಇತರೆ ಅಗತ್ಯ ಸಾಮಗ್ರಿಗಳೂ ಸೇರಿವೆ. ಜೀವ ಲೆಕ್ಕಿಸದೇ ಮಕ್ಕಳ ರಕ್ಷಣೆ
ಭೂಕಂಪ ಸಂಭವಿಸಿದ ವೇಳೆ ಜನರು ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಓಡುತ್ತಿದ್ದರೆ, ಟರ್ಕಿಯ ಗಾಂಜಿಯಾಟೆಪ್‌ನ ಆಸ್ಪತ್ರೆಯೊಂದರಲ್ಲಿ ನಿಜಾಮ್ ಹಾಗೂ ಗಜ್ವಲ್ ಕ್ಯಾಲಿಸ್ಕನ್ ಎನ್ನುವ ಇಬ್ಬರು ನರ್ಸ್‌ಗಳು ತಮ್ಮ ಜೀವವನ್ನೂ ಲೆಕ್ಕಿಸದೇ ನವಜಾತ ಶಿಶುಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಈಗ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
Related Articles
ಇತ್ತೀಚೆಗೆ ಅವಶೇಷಗಳಡಿಯಲ್ಲಿ ಮಗುವೊಂದು ಜನಿಸಿದರೆ, ಇತ್ತ ಅದೇ ಅವಶೇಷಗಳಡಿಯಲ್ಲಿ 2 ತಿಂಗಳ ಹಸುಗೂಸೊಂದು ಜೀವ ಬಿಗಿಹಿಡಿದು ಜೀವಿಸಿದೆ. ಬರೋಬರಿ 128 ಗಂಟೆ ಬಳಿಕ ಆ ಕಂದನನ್ನು ರಕ್ಷಿಸಲಾಗಿದೆ. ರಕ್ಷಿಸಿದವರ ಬೆಚ್ಚಗಿನ ಕೈ ಸ್ಪರ್ಶದ ಬಳಿಕ ಹಾಲಿಗಾಗಿ ಹಾತೊರೆದು, ಬಾಯಿ ಚಪ್ಪರಿಸುವ ಮಗುವಿನ ಮುಗ್ಧಮುಖ ಟರ್ಕಿಯ ದುರಂತಕ್ಕೆ ವಿಧಿಯನ್ನು ಶಪಿಸುವಂತೆ ಮಾಡಿದೆ.
Advertisement