Advertisement

ನ್ಯೂಜೆರ್ಸಿ: NRI ವೈದ್ಯರಿಬ್ಬರ ಬಲಿ

10:06 AM May 09, 2020 | sudhir |

ಅಮೆರಿಕದ ನ್ಯೂಜೆರ್ಸಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಭಾರತೀಯ-ಅಮೆರಿಕನ್‌ ಅಪ್ಪ-ಮಗಳು ಕೋವಿಡ್ ಗೆ ಬಲಿಯಾದ ಘಟನೆ ಶುಕ್ರವಾರ ವರದಿಯಾಗಿದೆ. ನ್ಯೂಜೆರ್ಸಿ ಗವರ್ನರ್‌ ಫಿಲ್‌ ಮರ್ಫಿ ಅವರೇ ಈ ವಿಚಾರ ಬಹಿರಂಗಪಡಿಸಿದ್ದಾರೆ. ತಮ್ಮ ಜೀವವನ್ನೇ ಪಣವಾಗಿಟ್ಟು, ಕೋವಿಡ್ ರೋಗಿಗಳ ಸೇವೆಗೈಯುತ್ತಿದ್ದ ಅಪ್ಪ-ಮಗಳ ಸಾವು ನಮಗೆಲ್ಲರಿಗೂ ನೋವು ತಂದಿದೆ ಎಂದು ಹೇಳಿದ್ದಾರೆ.

Advertisement

ಹಲವು ದಶಕಗಳಿಂದಲೂ ನ್ಯೂಜೆರ್ಸಿಯ ಪ್ರಮುಖ ಆಸ್ಪತ್ರೆಗಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಸರ್ಜನ್‌ ಸತ್ಯೇಂದರ್‌ ದೇವ್‌ ಖನ್ನಾ (78) ಹಾಗೂ ಅವರ ಮಗಳಾದ ಡಾ| ಪ್ರಿಯಾ ಖನ್ನಾ (43) ಅವರೇ  ಕೋವಿಡ್ ಗೆ ಬಲಿಯಾದವರು. ಪ್ರಿಯಾ ಅವರು ಇಂಟರ್ನಲ್‌ ಮೆಡಿಸಿನ್‌ ಮತ್ತು ನೆಫ್ರಾಲಜಿಯಲ್ಲಿ ಪರಿಣತಿ ಹೊಂದಿದ್ದರು. ತಾವು 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಕ್ಲಾರಾ ಮಾಸ್‌ ಮೆಡಿಕಲ್‌ ಸೆಂಟರ್‌ನಲ್ಲಿ ಸತ್ಯೇಂದರ್‌ ಮತ್ತು ಪ್ರಿಯಾ ಕೊನೆಯುಸಿರೆಳೆದಿದ್ದಾರೆ.

ಡಾ| ಸತ್ಯೇಂದರ್‌ ಹಾಗೂ ಪ್ರಿಯಾ ಖನ್ನಾ ಅವರು ಪರರ ಸೇವೆಗೆಂದೇ ಜೀವವನ್ನು ಮುಡುಪಾಗಿಟ್ಟರು. ಅವರ ಇಡೀ ಕುಟುಂಬವೇ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿದೆ. ಅವರನ್ನು ಕಳೆದುಕೊಂಡ ನೋವನ್ನು ಪದಗಳಲ್ಲಿ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದೂ ಗವರ್ನರ್‌ ಮರ್ಫಿ ಟ್ವೀಟ್‌ ಮಾಡಿದ್ದಾರೆ.

ಸತ್ಯೇಂದರ್‌ ಪತ್ನಿ ಕೋಮಲೀಶ್‌ ಖನ್ನಾ ಮಕ್ಕಳ ತಜ್ಞೆಯಾಗಿದ್ದಾರೆ. ದಂಪತಿಯ ಮತ್ತಿಬ್ಬರು ಹೆಣ್ಣುಮಕ್ಕಳಾದ ಸುಗಂಧ ಖನ್ನಾ ಮತ್ತು ಅನಿಶಾ ಖನ್ನಾ ಅವರೂ ವೈದ್ಯರಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next