Advertisement

Employment Rate: ಯುಪಿಎ 2.9 ಕೋಟಿ,ಮೋದಿ 17.9 ಕೋಟಿ ಉದ್ಯೋಗ ಸೃಷ್ಟಿ: ಸಚಿವ

08:26 PM Jan 02, 2025 | Team Udayavani |

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮತ್ತು ಪ್ರತಿಪಕ್ಷಗಳ ನಡುವೆ “ನಿರುದ್ಯೋಗ’ ಸಮರ ನಡೆಯುತ್ತಿದೆ. ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರವು ತನ್ನ 10 ವರ್ಷಗಳ ಅವಧಿಯಲ್ಲಿ ಕೇವಲ 2.9 ಕೋಟಿ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಿದರೆ, ಮೋದಿ ಆಡಳಿತವು 17.19 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ. ಕಳೆದ ಒಂದು ವರ್ಷದಲ್ಲಿ (2023-24) ಮೋದಿ ಸರ್ಕಾರ 4.6 ಕೋಟಿ ಉದ್ಯೋಗ ಸೃಷ್ಟಿಸಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನಸುಖ ಮಾಂಡವಿಯ ಹೇಳಿದ್ದಾರೆ.

Advertisement

ದೇಶದಲ್ಲಿ ಒಟ್ಟು ಉದ್ಯೋಗವು 2014-15ರಲ್ಲಿ 47.15 ಕೋಟಿ ಇತ್ತು. ಇದು 2023-24ರ ಹೊತ್ತಿಗೆ 64.33 ಕೋಟಿಗೆ ಅಂದರೆ, ಶೇ.36ರಷ್ಟು ಏರಿಕೆಯಾಗಿದೆ. ಆದರೆ, 2003-04ರಲ್ಲಿ ಇದ್ದ 44.23 ಕೋಟಿ ಉದ್ಯೋಗ 2014-15ರಲ್ಲಿ 47.15 ಕೋಟಿಗೆ ಏರಿಕೆಯಾಗಿತ್ತು ಎಂದು ಮಾಹಿತಿ ನೀಡಿದರು. ಅಲ್ಲದೆ, ಇದು ಆರ್‌ಬಿಐ ಅಂಕಿಅಂಶವಾಗಿದ್ದು, ನಮ್ಮ ಮಾಹಿತಿಯಲ್ಲ ಎಂದೂ ಹೇಳಿದ್ದಾರೆ.

 

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next