ಕೋಲ್ಕತ್ತಾ: ಐತಿಹಾಸಿಕ ಪಿಂಕ್ ಟೆಸ್ಟ್ ನಲ್ಲಿ ಭಾರತ ತಂಡ ಬಾಂಗ್ಲಾ ವಿರುದ್ಧ ಇನ್ನಿಂಗ್ಸ್ ಮತ್ತು 45 ರನ್ ಅಂತರದಿಂದ ಭರ್ಜರಿ ಜಯ ಸಾಧಿಸಿದೆ.
ಎರಡನೆ ದಿನದ ಅಂತ್ಯಕ್ಕೆ 156 ರನ್ ಗೆ ಆರು ವಿಕೆಟ್ ಕಳೆದುಕೊಂಡು ಸೋಲಿನ ಸಂಕಷ್ಟದಲ್ಲಿದ್ದ ಬಾಂಗ್ಲಾ ಇಂದು ಒಟ್ಟು 195 ರನ್ ಗಳಿಗೆ ಸರ್ವಪತನ ಕಂಡಿತು.
ಎರಡನೇ ಇನ್ನಿಂಗ್ಸ್ ನಲ್ಲಿ ಮತ್ತೆ ಘಾತಕ ಬೌಲಿಂಗ್ ನಡೆಸಿದ ಉಮೇಶ್ ಯಾದವ್ ಐದು ವಿಕೆಟ್ ಕಿತ್ತರೆ, ಇಶಾಂತ್ ಶರ್ಮಾ ನಾಲ್ಕು ವಿಕೆಟ್ ಪಡೆದರು.
ಪಂದ್ಯದಲ್ಲಿ ಒಟ್ಟು ಒಂಬತ್ತು ವಿಕೆಟ್ ಕಿತ್ತ ಇಶಾಂತ್ ಶರ್ಮಾ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಬಾಂಗ್ಲಾ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 106 ರನ್ ಗೆ ಆಲ್ ಔಟ್ ಆಗಿದ್ದರೆ, ಭಾರತ 347 ರನ್ ಗಳಿಸಿತ್ತು. ನಾಯಕ ಕೊಹ್ಲಿ ಭರ್ಜರಿ ಶತಕ ಬಾರಿಸಿ ಮಿಂಚಿದ್ದರು.
ಈ ಜಯದೊಂದಿಗೆ ಭಾರತ ಸತತ ನಾಲ್ಕು ಪಂದ್ಯಗಳನ್ನು ಇನ್ನಿಂಗ್ಸ್ ಅಂತರದಿಂದ ಜಯಿಸಿತು. ವಿಶ್ವ ಕ್ರಿಕೆಟ್ ನಲ್ಲಿ ಇದೇ ಮೊದಲು ಯಾವುದೇ ತಂಡ ಇಂತಹ ಸಾಧನೆ ಮಾಡಿರುವುದು.