ಹೊಸದಿಲ್ಲಿ: ಭಾರತ ಮಹಿಳಾ ಅಂಡರ್-17 ತಂಡದ ಸಹಾಯಕ ಕೋಚ್ ಅಲೆಕ್ಸ್ ಆಂಬ್ರೋಸ್ ಅವರನ್ನು ವಜಾಗೊಳಿಸಲಾಗಿದೆ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಮೇಲ್ವಿಚಾರಣೆಯ ಸುಪ್ರೀಂ ಕೋರ್ಟ್ ನೇಮಿಸಿದ ಆಡಳಿತಾಧಿಕಾರಿಗಳ ಸಮಿತಿಯ (ಸಿಒಎ) ಸದಸ್ಯ ಡಾ. ಎಸ್.ವೈ. ಖುರೇಶಿ ಖಚಿತಪಡಿಸಿದ್ದಾರೆ. ಅಲೆಕ್ಸ್ ಆಂಬ್ರೋಸ್ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿತ್ತು.
” ಅಂಡರ್ 17 ಮಹಿಳಾ ತಂಡದ ಕೋಚ್ ಅಲೆಕ್ಸ್ ಆಂಬ್ರೋಸ್ ಅವರನ್ನು ಲೈಂಗಿಕ ದುರ್ನಡತೆಗಾಗಿ ವಜಾಗೊಳಿಸಲಾಗಿದೆ. ಮುಂದಿನ ಕ್ರಮ ಪ್ರಕ್ರಿಯೆಯಲ್ಲಿದೆ” ಎಂದು ಖುರೇಶಿ ಟ್ವೀಟ್ ಮಾಡಿದ್ದಾರೆ.
ಎಐಎಫ್‌ಎಫ್ ಜೂನ್ 30 ರಂದು ನೀಡಿದ ಹೇಳಿಕೆಯಲ್ಲಿ ಅಪರಾಧಿಯ ಹೆಸರನ್ನು ಉಲ್ಲೇಖಿಸದೆ ಅಥವಾ ಅಪರಾಧವನ್ನು ನಿರ್ದಿಷ್ಟಪಡಿಸದೆ ಘಟನೆಯ ಸುಳಿವು ನೀಡಿತ್ತು.
ಇದನ್ನೂ ಓದಿ:ಮ್ಯಾಂಚೆಸ್ಟರ್ ಯುನೈಟೆಡ್ ತೊರೆಯಲು ಮುಂದಾದ ಕ್ರಿಸ್ಟಿಯಾನೊ ರೊನಾಲ್ಡೊ
“ಪ್ರಸ್ತುತ ಯುರೋಪ್ ಪ್ರವಾಸದಲ್ಲಿರುವ ಅಂಡರ್ 17 ಮಹಿಳಾ ತಂಡದಲ್ಲಿ ದುರ್ನಡತೆಯ ಘಟನೆ ವರದಿಯಾಗಿದೆ. ಎಐಎಫ್‌ಎಫ್ ಅಶಿಸ್ತಿನ ಬಗ್ಗೆ ಶೂನ್ಯ ಸಹಿಷ್ಣು ನೀತಿಯನ್ನು ಅನುಸರಿಸುತ್ತದೆ. ತಂಡದೊಂದಿಗಿನ ಎಲ್ಲಾ ಸಂಪರ್ಕಗಳನ್ನು ನಿಲ್ಲಿಸಲು, ತಕ್ಷಣವೇ ಭಾರತಕ್ಕೆ ಹಿಂತಿರುಗಲು ಮತ್ತು ಅವರು ಆಗಮನದ ನಂತರ ಹೆಚ್ಚಿನ ತನಿಖೆಗಾಗಿ ಭೌತಿಕವಾಗಿ ಹಾಜರಾಗಲು ಸಂಬಂಧಪಟ್ಟ ವ್ಯಕ್ತಿಯನ್ನು ಕೇಳಿಕೊಂಡಿದ್ದಾರೆ” ಎಂದು ಎಐಎಫ್‌ಎಫ್ ಹೇಳಿಕೊಂಡಿತ್ತು.
ಭಾರತವು ಈ ವರ್ಷದ ಕೊನೆಯಲ್ಲಿ ಅಕ್ಟೋಬರ್‌ನಲ್ಲಿ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್‌ಗೆ ಆತಿಥ್ಯ ವಹಿಸಲಿದೆ. ಪಂದ್ಯಗಳು ಮೂರು ನಗರಗಳಲ್ಲಿ ನಡೆಯಲಿವೆ. ಭುವನೇಶ್ವರ್, ಗೋವಾ ಮತ್ತು ನವಿ ಮುಂಬೈ ನಲ್ಲಿ ಅಕ್ಟೋಬರ್ 11 ರಿಂದ 30 ರವರೆಗೆ ಕೂಟ ನಡೆಯಲಿದೆ. ಭಾರತವು ಯುಎಸ್‌ಎ, ಮೊರಾಕೊ ಮತ್ತು ಬ್ರೆಜಿಲ್ ತಂಡಗಳಿರುವ ಕ್ಲಬ್ ನಲ್ಲಿದೆ.