Advertisement

2021ರಲ್ಲಿ ಭಾರತಕ್ಕೆ ಯುಎನ್‌ಎಸ್‌ಸಿ ಅಧ್ಯಕ್ಷ ಪಟ್ಟ

02:00 AM Jun 20, 2020 | Hari Prasad |

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ತಾತ್ಕಾ­ಲಿಕ ಸದಸ್ಯ ಸ್ಥಾನಕ್ಕೆ ಆಯ್ಕೆಯಾಗಿರುವ ಭಾರತ, 2021ರ ಆಗಸ್ಟ್‌­ನಲ್ಲಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೇರಲಿದೆ ಎಂದು ವಿಶ್ವಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

Advertisement

ಸದಸ್ಯ ರಾಷ್ಟ್ರಗಳಿಗೆ ಅವರ ದೇಶದ ಹೆಸರಿನ ಮೊದಲ ಅಕ್ಷ ರದ ಆಧಾರದಲ್ಲಿ ಆವರ್ತನ ಪದ್ಧತಿ­ಯಡಿ ಅಧ್ಯಕ್ಷ ಸ್ಥಾನ ಬರಲಿದೆ.

ಈ ನಡುವೆ, ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ರಾಯಭಾರಿಯಾಗಿರುವ ಟಿ.ಎಸ್‌. ತಿರುಮೂರ್ತಿ ಅವರು, ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಲಗ್ಗೆ­ಯಿಟ್ಟಿ­ರುವ ಭಾರತ, ಮಂಡಳಿಯ ಕಾರ್ಯವೈಖರಿ­­ಯಲ್ಲಿ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ” ಎಂದಿದ್ದಾರೆ.

ಭದ್ರತಾ ಮಂಡಳಿಯ ಕಾರ್ಯ­ವೈಖ­ರಿಯು 21ನೇ ಶತಮಾನದ ಭೌಗೋ­ಳಿಕ-­ರಾಜಕೀಯ ಸಮಸ್ಯೆಗಳಿಗೆ ಅನುಗುಣವಾ­ಗಿಲ್ಲ. ಹಾಗಾಗಿ, ಅದರಲ್ಲಿ ಸುಧಾರಣೆ ಆಗಬೇಕು ಎಂಬ ದಶಕಗಳ ಬೇಡಿಕೆಯನ್ನು ಭಾರತ ಸಾಕಾರಗೊಳಿಸಲು ಪ್ರಯತ್ನಿಸಲಿದೆ” ಎಂದು ಅವರು ಗುರುವಾರ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next