ಪ್ಯಾರಿಸ್: ಒಲಿಂಪಿಕ್ಸ್ ಹಾಕಿ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ಮತ್ತು ಗ್ರೇಟ್ ಬ್ರಿಟನ್ ತಂಡಗಳು ಸತತ 2ನೇ ಸಲ ಎದುರಾಗುತ್ತಿವೆ! ಈ ತಂಡಗಳು ಕಳೆದ ಟೋಕಿಯೊ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್ ನಲ್ಲೂ ಪರಸ್ಪರ ಮುಖಾಮುಖೀ ಯಾಗಿದ್ದವು. ಇದನ್ನು 3-1ರಿಂದ ಗೆದ್ದ ಭಾರತ ಸೆಮಿಪೈನಲ್ ಪ್ರವೇಶಿಸಿತ್ತು. ಬಳಿಕ ಕಂಚು ಗೆದ್ದು ಪದಕದ ಬರಗಾಲ ನೀಗಿಸಿಕೊಂಡಿತ್ತು.
ರವಿವಾರದ ಪ್ಯಾರಿಸ್ ಒಲಿಂಪಿಕ್ಸ್ ಹಾಕಿ ಕೂಟದ ಮೊದಲ ಕ್ವಾರ್ಟರ್ ಫೈನಲ್ ಭಾರತ ಮತ್ತು ಗ್ರೇಟ್ ಬ್ರಿಟನ್ ನಡುವೆ ಏರ್ಪಡಲಿದೆ. ಶುಕ್ರವಾರವಷ್ಟೇ ಆಸ್ಟ್ರೇಲಿಯ ವಿರುದ್ಧ ಜಯಭೇರಿ ಮೊಳಗಿಸಿದ ಭಾರತ, “ಬಿ’ ವಿಭಾಗದ ದ್ವಿತೀಯ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿತ್ತು. ಗ್ರೇಟ್ ಬ್ರಿಟನ್ “ಎ’ ವಿಭಾಗದಲ್ಲಿ 3ನೇ ಸ್ಥಾನಿಯಾಗಿದೆ. ಭಾರತ ಟೋಕಿಯೊ ಫಲಿತಾಂಶವನ್ನು ಪುನರಾವರ್ತಿಸಿದರೆ ಮತ್ತೂಂದು ಪದಕಕ್ಕೆ ಕೈಚಾಚಬಹುದು.
ಪ್ಯಾರಿಸ್‌ನಲ್ಲಿ ಭಾರತದ ಸುಧಾರಿತ ಪ್ರದರ್ಶನ ನೀಡುತ್ತ ಬಂದಿದೆ. ಮುಖ್ಯವಾಗಿ ಫಾರ್ವರ್ಡ್ ವಿಭಾಗ ಹೆಚ್ಚು ಬಲಶಾಲಿಯಾಗಿ ಗೋಚರಿ ಸಿದೆ. ಒಲಿಂಪಿಕ್ಸ್‌ಗೂ ಮುನ್ನ ಭಾರತದ ಫಾರ್ವರ್ಡ್ ವಿಭಾಗ ಭಾರೀ ಪರದಾಟ ನಡೆಸುತ್ತಿತ್ತು.
ಪ್ಯಾರಿಸ್‌ನಲ್ಲೂ ಈ ಸಮಸ್ಯೆ ತಲೆ ದೋರಿತು. ಆದರೆ ಫುಲ್ಟನ್ ಆ್ಯಂಡ್ ಕಂಪೆನಿ ಇದನ್ನು ಹೋಗಲಾಡಿಸುವಲ್ಲಿ ಯಶಸ್ವಿಯಾಗಿದೆ. ಬೆಲ್ಜಿಯಂ ಮತ್ತು ಆಸ್ಟ್ರೇಲಿಯ ವಿರುದ್ಧ ಭಾರತದ ಆಟವನ್ನು ಗಮನಿಸಿದರೆ ಇದನ್ನು ಅರಿಯಬಹುದು. ಅಭಿಷೇಕ್, ಮನ್‌ದೀಪ್ ಸಿಂಗ್ ಭರ್ಜರಿ ಯಶಸ್ಸು ಸಾಧಿಸಿದ್ದಾರೆ. ಸುಖಜೀತ್ ಸಿಂಗ್, ಗುರ್ಜಂತ್ ಸಿಂಗ್ ಕೂಡ ಇವರ ಆಟದಿಂದ ಪ್ರಭಾವಿತ ರಾಗಿದ್ದಾರೆ. ಆಕ್ರಮಣಕಾರಿ ಮಿಡ್‌ಫಿàಲ್ಡರ್ ರಾಜ್‌ಕುಮಾರ್ ಪಾಲ್, ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರದು ಬೊಂಬಾಟ್ ಆಟ.
ಹಾಕಿ ಕ್ವಾರ್ಟರ್ ಫೈನಲ್ಸ್:
ಪಂದ್ಯ ಸಮಯ:
- ಭಾರತ-ಗ್ರೇಟ್ ಬ್ರಿಟನ್ ಅ. 1.30
- ಬೆಲ್ಜಿಯಂ-ಸ್ಪೇನ್ ಸಂಜೆ 4.00
- ನೆದರ್ಲೆಂಡ್ಸ್- ಆಸ್ಟ್ರೇಲಿಯ ರಾತ್ರಿ 9.00
- ಜರ್ಮನಿ-ಆರ್ಜೆಂಟೀನ ರಾತ್ರಿ 11.30