Advertisement

ಆಸಿಸ್‌ ವಿರುದ್ಧ ಮೊದಲೆರಡು ಟೆಸ್ಟ್‌ : ಕೊಹ್ಲಿ ಟೀಮ್‌ ಪ್ರಕಟ

02:44 PM Feb 14, 2017 | |

ಮುಂಬಯಿ : ಪ್ರವಾಸಿ ಆಸ್ಟ್ರೇಲಿಯದ ವಿರುದ್ದದ ನಾಲ್ಕು ಟೆಸ್ಟ್‌ ಪಂದ್ಯಗಳ ಸರಣಿಯ ಮೊದಲ 2 ಪಂದ್ಯಗಳಿಗೆ ಭಾರತ ತಂಡವನ್ನು ಬಿಸಿಸಿಐ ಮಂಗಳವಾರ ಪ್ರಕಟಿಸಿದೆ.

Advertisement

ಮಾಜಿ ವಿಕೆಟ್‌ ಕೀಪರ್‌ ಎಂಎಸ್‌ಕೆ ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಿದ್ದು ಹೆಚ್ಚಿನ ಬದಲಾವಣೆ ಮಾಡದೆ ಹಳೆಯ ತಂಡವನ್ನೇ ಮುಂದುವರಿಸಲಾಗಿದೆ. 

ಕನ್ನಡಿಗ ಕರುಣ್‌ ನಾಯರ್‌ ಅವರ ಹೆಸರು 16 ಮಂದಿ ಆಟಗಾರರ ಪಟಿಯಲ್ಲಿ ಕಾಣಿಸಕೊಂಡಿದ್ದು ಆಡುವ 11 ರ ಬಳಗದಲ್ಲಿ ಇರಲಿದ್ದಾರೆಯೇ ಎನ್ನುವುದು ಕುತೂಹಲ. 

 ತ್ರಿಶತಕ ಸಿಡಿಸಿದ ಹೊರತಾಗಿಯೂ ಬಾಂಗ್ಲಾ ವಿರುದ್ಧದ ಪಂದ್ಯಕ್ಕೆ 11 ರ ಬಳಗದಲ್ಲಿ ನಾಯರ್‌ ಕಡೆಗಣಿದ್ದ ಬಿಸಿಸಿಐ ಕ್ರಮದ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. 

ತಂಡ ಇಂತಿದೆ
ವಿರಾಟ್‌ ಕೊಹ್ಲಿ (ನಾಯಕ) ಮುರಳಿ ವಿಜಯ್, ಲೋಕೇಶ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಇಶಾಂತ್ ಶರ್ಮ, ಭುವನೇಶ್ವರ ಕುಮಾರ್, ಉಮೇಶ್ ಯಾದವ್, ಕರುಣ್ ನಾಯರ್, ಜಯಂತ್ ಯಾದವ್, ಕುಲದೀಪ್ ಯಾದವ್, ಅಭಿನವ್ ಮುಕುಂದ್ ಮತ್ತು ಹಾರ್ದಿಕ್‌ ಪಾಂಡ್ಯ

Advertisement

ಬಾರ್ಡರ್‌ -ಗವಾಸ್ಕರ್‌ ಟ್ರೋಫಿಯ  ಮೊದಲ ಟೆಸ್ಟ್‌ ಫೆಬ್ರವರಿ 23 ರಂದು ಪುಣೆಯಲ್ಲಿ ಆರಂಭವಾಗಲಿದೆ. ಮಾರ್ಚ್‌ 4 ರಿಂದ ಬೆಂಗಳೂರಿನಲ್ಲಿ 2 ನೇ ಟೆಸ್ಟ್‌, ಮಾರ್ಚ್‌ 16 ರಿಂದ ರಾಂಚಿಯಲ್ಲಿ 3 ನೇ ಟೆಸ್ಟ್‌ ಮತ್ತು ಮಾರ್ಚ್‌ 25 ರಂದು ಧರ್ಮಶಾಲೆಯಲ್ಲಿ ಕೊನೆಯ ಟೆಸ್ಟ್‌ ನಡೆಯಲಿದೆ. ಆಸೀಸ್‌ಗೆ ಸ್ಟೀವ್‌ ಸ್ಮಿತ್‌ ಅವರ ನಾಯಕತ್ವವಿದೆ. 

Advertisement

Udayavani is now on Telegram. Click here to join our channel and stay updated with the latest news.

Next