ಮುಂಬಯಿ: ವಿಶ್ವಕಪ್‌ನಲ್ಲಿ ಇಷ್ಟರವರೆಗೆ ನಡೆದ ಪಂದ್ಯಗಳಲ್ಲಿ ಅಮೋಘ ನಿರ್ವಹಣೆ ನೀಡಿರುವ ಆತಿಥೇಯ ಭಾರತ ತಂಡವು ಗುರುವಾರ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕಾಗಿ ಭಾರತೀಯ ತಂಡದ ಕೆಲವು ಆಟಗಾರರು ನೆಟ್‌ನಲ್ಲಿ ಅಭ್ಯಾಸ ನಡೆಸಿದರು. ಆದರೆ ತಂಡದ ಅಗ್ರ ಆಟಗಾರರಾದ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಶುಭ್‌ಮನ್ ಗಿಲ್ ಅವರು ಅಭ್ಯಾಸ ನಡೆಸಿಲ್ಲ.
ಕೆಳ ಹಂತದ ಎಸೆತಗಳನ್ನು ಎದುರಿ ಸಲು ಬಹಳಷ್ಟು ಒದ್ದಾಡುತ್ತಿರುವ ನಾಲ್ಕನೇ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ಅವರು ದೀರ್ಘ ಸಮಯ ಅಭ್ಯಾಸ ನಡೆಸಿದರು. ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಅಯ್ಯರ್ ತಾಲೀಮ್ ನಡೆಸಿದರು. ಇಂಗ್ಲೆಂಡ್ ವಿರುದ್ಧ 100 ರನ್ ಗೆಲುಲು ದಾಖಲಿ ಸಲು ನೆರವಾದ ಪ್ರಮುಖ ಬೌಲರ್‌ಗಳು ಕೂಡ ಅಭ್ಯಾಸ ನಡೆಸಿಲ್ಲ.
ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಮತ್ತು ಸೆಮಿಫೈನಲ್ ಹಂತಕ್ಕೇರುವುದು ಬಹುತೇಕ ಖಚಿತಗೊಂಡ ಕಾರಣ ಭಾರತ ತಂಡವು ಪ್ರಮುಖ ಆಟಗಾರರಿಗೆ ಇನ್ನುಳಿದ ಪಂದ್ಯಗಳಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಇತರ ಆಟಗಾರರಿಗೆ ಆಡುವ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ.
ಶ್ರೀಲಂಕಾ ವಿರುದ್ಧದ ಪಂದ್ಯ ಮುಂಬಯಿಯಲ್ಲಿ ನಡೆಯುವ ಕಾರಣ ಶ್ರೇಯಸ್ ಅಯ್ಯರ್ ಈ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ನಾಯಕ ರೋಹಿತ್, ಸೂರ್ಯಕುಮಾರ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಈ ಪಂದ್ಯದಲ್ಲಿ ಆಡುವ ಸಂಭವದಿದೆ. ಇವರೆಲ್ಲ ಸುಮಾರು ತಾಸು ನುರಿತ ಹಾಗೂ ನೆಟ್ ಬೌಲರ್‌ಗಳ ದಾಳಿಯನ್ನು ಎದುರಿಸಿದರು.
ಅಯ್ಯರ್ ಅವರಲ್ಲದೇ ಆಲ್‌ರೌಂಡರ್ ಶಾರ್ದೂಲ್, ಇಶನ್ ಕಿಶನ್, ರಾಹುಲ್ ಬಹಳಷ್ಟು ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಆಲ್‌ರೌಂಡರ್ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ಬೌಲಿಂಗ್‌ಗಿಂತ ಹೆಚ್ಚಿನ ಸಮಯ ಬ್ಯಾಟಿಂಗ್ ಅಭ್ಯಾಸ ಪಡೆದರು.