Advertisement

100 ಕೋಟಿ ಕೋವಿಡ್ ವ್ಯಾಕ್ಸಿನ್ ದಾಖಲೆ ಬರೆಯುತ್ತಿದ್ದೇವೆ : ಜೆ.ಪಿ.ನಡ್ಡಾ

07:43 PM Oct 10, 2021 | Team Udayavani |

ಇಂಫಾಲ್ : ನಾವು ನಮ್ಮ ದೇಶದ ಜನರಿಗಾಗಿ ಮಾತ್ರವಲ್ಲದೆ ರಫ್ತು ಮಾಡುವ ಉದ್ದೇಶದಿಂದಲೂ ಕೋವಿಡ್ ಲಸಿಕೆಗಳನ್ನು ಉತ್ಪಾದಿಸುತ್ತಿದ್ದೇವೆ. ಶೀಘ್ರದಲ್ಲಿ 100 ಕೋಟಿ ಲಸಿಕೆ ನೀಡಿ ದಾಖಲೆ ಬರೆಯುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭಾನುವಾರ ಹೇಳಿಕೆ ನೀಡಿದ್ದಾರೆ.

Advertisement

ಮಣಿಪುರದ ನೂತನ ಬಿಜೆಪಿ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಮೂರು ನಾಲ್ಕು ದಿನಗಳಲ್ಲಿ ನಾವು ನೂರು ಕೋಟಿ ಲಸಿಕೆ ನೀಡಿ ಪೂರೈಸುತ್ತೇವೆ. ವಿಪಕ್ಷಗಳು ನಮ್ಮಲ್ಲಿ ಲಸಿಕೆ ಇಲ್ಲ ಎಂದು ಸುಳ್ಳು ಆರೋಪ ಮಾಡಿದ್ದವು, ನಾವೀಗ ವಿಶ್ವಕ್ಕೆ ಲಸಿಕೆ ನೀಡುವಷ್ಟು ಶಕ್ತರಾಗಿದ್ದೇವೆ ಎಂದರು.

ಇಂಫಾಲವನ್ನು ಪ್ರಧಾನಿ ಮೋದಿ ಹೊಸ ಅಭಿವೃದ್ಧಿಯತ್ತ ಕೊಂಡೊಯ್ಯಲಿದ್ದಾರೆ. ಅಂದು ಸುಭಾಷ್ ಚಂದ್ರ ಬೋಸ್ ಅವರು ಅಜಾದ್ ಹಿಂದ್ ಫೌಜ್ ನ ಧ್ವಜ ಹಾರಿಸಿ ಸ್ವಾತಂತ್ರ್ಯದ ಹೆಬ್ಬಾಗಿಲನ್ನಾಗಿಸಿದ್ದರು. ಇಂದು ಪ್ರಧಾನಿ ಮೋದಿ ಅವರು ಅಭಿವೃದ್ಧಿಯ ಹೆಬ್ಬಾಗಿಲನ್ನಾಗಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next