Advertisement
ಬಿಹಾರದ ವಿಧಾನ ಸಭೆಯು ನಿರ್ಮಾಣವಾಗಿ ನೂರು ವರ್ಷಗಳು ಸಂದ ನೆನಪಿಗಾಗಿ ವಿಧಾನಸಭೆಯ ಆವರಣದಲ್ಲಿ ನೂತನ ವಾಗಿ ನಿರ್ಮಿಸಲಾಗಿರುವ ಸ್ತಂಭವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
Related Articles
Advertisement
ದೇವಗಢದಲ್ಲಿ ಆಯೋಜಿಸಲಾಗಿದ್ದ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕಾಗಿ ಶಾರ್ಟ್ ಕಟ್ ಹಾದಿಗಳನ್ನು ಹಿಡಿದ ಎಲ್ಲ ಪಕ್ಷಗಳು ಶಾರ್ಟ್ ಸಕ್ಯೂಟ್‌ಗೆ ತುತ್ತಾಗಬೇಕಾಗುತ್ತದೆ ಎಂಬ ಲಘು ಹಾಸ್ಯದ ಮೂಲಕ ರಾಜಕೀಯ ಪಕ್ಷಗಳಿಗೆ ಕಿವಿಮಾತು ಹೇಳಿದರು.
ದೇಶದಲ್ಲಿರುವ ಪುಣ್ಯಸ್ಥಳಗಳು, ಈ ದೇಶಕ್ಕೊಂದು ಅಸ್ಮಿತೆಯನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇಂಥ ಪುಣ್ಯಕ್ಷೇತ್ರಗಳಲ್ಲಿ ಆಧುನಿಕ ಸವಲತ್ತುಗಳನ್ನು ನಿರ್ಮಿಸಲು ನಮ್ಮ ಸರಕಾರ ಕಾರ್ಯೋನ್ಮುಖವಾಗಿದೆ. ಹಾಗಾಗಿ ಅಯೋಧ್ಯೆ, ವಾರಾಣಸಿ, ಕಾಶಿ, ಬೈದ್ಯನಾಥ ಮುಂತಾದೆಡೆ ಉತ್ತಮ ವಿಶ್ವದರ್ಜೆಯ ಸೌಕರ್ಯಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಬೈದ್ಯನಾಥನಿಗೆ ಮೋದಿ ಪೂಜೆಮಂಗಳವಾರ ಬೆಳಗ್ಗೆ ಝಾರ್ಖಂಡ್‌ನ ದೇವಧರ್‌ನಲ್ಲಿರುವ, ದೇಶದ 12 ಜ್ಯೋತಿರ್ಲಿಂಗಗಳಲ್ಲೊಂದಾದ ಬಾಬಾ ಬೈದ್ಯನಾಥ್ ದೇಗುಲಕ್ಕೆ ಭೇಟಿ ನೀಡಿದ ಮೋದಿ, ಅಲ್ಲಿನ ಶಿವಲಿಂಗಕ್ಕೆ ಅಭಿಷೇಕ, ಪೂಜೆ ನೆರವೇರಿಸಿದರು. ಬೆಳಗ್ಗೆ ದೇಗುಲದ ವಿಐಪಿ ದ್ವಾರಕ್ಕೆ ಮೋದಿಯವರು ಆಗಮಿಸಿದಾಗ, ವೇದ ಮಂತ್ರಘೋಷ ಹಾಗೂ ಶಂಖನಾದಗಳಿಂದ ಸ್ವಾಗತ ನೀಡಲಾಯಿತು. ದ್ವಾರದ ಬಳಿ ನಿಂತಿದ್ದ 11 ಪುರೋಹಿತರು ಅವರಿಗೆ ಹೂಗುತ್ಛವನ್ನು ನೀಡಿ ಸ್ವಾಗತಿಸಿದರು. ಆನಂತರ ಅವರನ್ನು ದೇಗುಲದ ಸುಮುಖ ದ್ವಾರದ ಕಡೆಗೆ ಗಣೇಶನ ಪೂಜೆಗಾಗಿ ಕರೆದೊಯ್ಯಲಾಯಿತು. ದೇವಗಢದಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆ
ದೇವಗಢದಲ್ಲಿ ಬುಧವಾರ 401 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣವನ್ನು ಮೋದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಉಪಸ್ಥಿತರಿದ್ದರು. ಈ ನಿಲ್ದಾಣಕ್ಕೆ 2018, ಮೇ 25ರಂದು ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು.