Advertisement

ಮೊದಲ ಟಿ-20 ಸೋಲು; ಹೀರೋ ಆಗಿದ್ದ ಭಾರತ ಝೀರೋ

10:45 AM Feb 06, 2019 | |

ವೆಲ್ಲಿಂಗ್ಟನ್: ಕಿವೀಸ್ ವಿರುದ್ಧದ ಏಕದಿನ ಸರಣಿ ಗೆದ್ದು ಬೀಗಿದ್ದ ಟೀಮ್ ಇಂಡಿಯಾ ಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿ ದಯನೀಯವಾಗಿ ಸೋತಿದೆ. ವೆಸ್ಟ್ ಪಾಕ್ ಸ್ಟೇಡಿಯಮ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ರೋಹಿತ್ ಬಳಗ 80 ರನ್ ಅಂತರದಿಂದ ಸೋಲನುಭವಿಸಿತು.

Advertisement

ಟಾಸ್ ಗೆದ್ದು ಫಿಲ್ಡಿಂಗ್ ಮಾಡಿದ ಭಾರತದ ನಿರ್ಧಾರವನ್ನು ಸಮರ್ಥಿಸುವಲ್ಲಿ ಬೌಲರ್ ಗಳು ವಿಫಲರಾದರು. ಭರ್ಜರಿ ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ಬ್ಯಾಟ್ಸಮನ್ ಗಳು ನಿಗದಿತ 20 ಓವರ್ ಗಳಲ್ಲಿ 219 ರನ್ ಪೇರಿಸಿತು. ಆರಂಭಿಕ ಆಟಗಾರ ಟಿಮ್ ಸೈಫೆರ್ಟ್ ಭರ್ಜರಿ 84 ರನ್ ಬಾರಿಸಿದರೆ, ಕಾಲಿನ್ ಮನ್ರೋ  ಮತ್ತು ನಾಯಕ ಕೇನ್ ವಿಲಿಯಮ್ಸನ್ ತಲಾ 34 ರನ್ ಗಳಿಸಿದರು. ಭಾರತದ ಪರ ಹಾರ್ದಿಕ್ ಪಾಂಡ್ಯಾ ಎರಡು ವಿಕೆಟ್ ಪಡೆದರೂ 51 ರನ್ ನೀಡಿ ದುಬಾರಿಯಾದರು. 

ಕಿವೀಸ್ ನೀಡಿದ 220 ರನ್ ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೆ ಆಘಾತ ಎದುರಾಗಿತ್ತು. ನಾಯಕ ರೋಹಿತ್ ಶರ್ಮಾ ಕೇವಲ ಒಂದು ರನ್ ಗಳಿಸಿ ಸೌಥಿಗೆ ವಿಕೆಟ್ ಒಪ್ಪಿಸಿದರು. ನಂತರ ಶಿಖರ್ ಧವನ್ (29) ಮತ್ತು ಭಡ್ತಿ ಪಡೆದ ವಿಜಯ್ ಶಂಕರ್ (27) ರನ್ ಗಳಿಸಿದರು. ಬ್ಯಾಟ್ಸಮನ್ ಗಳಾದ ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯಾರಿಂದ ತಂಡಕ್ಕೆ ಯಾವುದೇ ನೆರವು ಸಿಗಲಿಲ್ಲ. 


ಕೊನೆಯಲ್ಲಿ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ 39 ರನ್ ಮತ್ತು ಕೃನಾಲ್ ಪಾಂಡ್ಯಾ 20 ರನ್ ಗಳಿಸಿದರೂ ತಂಡಕ್ಕೆ ಜಯ ತಂದು ಕೊಡಲು ಸಾಧ್ಯವಾಗಲಿಲ್ಲ. 19.2 ಓವರ್ ನಲ್ಲಿ ಭಾರತ 129 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕಿವೀಸ್ ಗೆ ಶರಣಾಯಿತು. 


ನ್ಯೂಜಿಲ್ಯಾಂಡ್ ಪರ ಟಿಮ್ ಸೌಥಿ ಮೂರು ವಿಕೆಟ್ ಪಡೆದರೆ, ಸ್ಕಾಟ್ ಕುಗ್ಗಿಲೀಜನ್, ಲ್ಯೂಕಿ ಫರ್ಗುಸನ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ ತಲಾ ಎರಡು ವಿಕೆಟ್ ಪಡೆದರು. ಟಿಮ್ ಸೈಫೆರ್ಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. 

80 ರನ್ ಗಳ ಸೋಲು ಭಾರತದ ಟಿ-20  ಇತಿಹಾಸದಲ್ಲಿ ಅತೀ ದೊಡ್ಡ ಸೋಲಾಗಿದೆ. ಈ ಹಿಂದೆ ಬ್ರಿಡ್ಜ್ ಟೌನ್ ನಲ್ಲಿ ಆಸ್ಟ್ರೇಲಿಯಾ   ವಿರುದ್ಧದ ಪಂದ್ಯದಲ್ಲಿ 49 ರನ್ ಗಳ ಸೋಲು ಅತೀ ದೊಡ್ಡ ಸೋಲಾಗಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next