Advertisement

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

09:06 PM Dec 24, 2024 | Team Udayavani |

ಮೆಲ್ಬರ್ನ್: ಮೆಲ್ಬರ್ನ್ ನಲ್ಲಿ ಗುರುವಾರ ಆರಂಭವಾಗಲಿರುವ “ಬಾಕ್ಸಿಂಗ್‌ ಡೇ’ ಟೆಸ್ಟ್‌ ಪಂದ್ಯಕ್ಕೆ ಭರದಿಂದ ಭಾರತ ಅಭ್ಯಾಸ ಮಾಡುತ್ತಿದೆ. ದಿಢೀರನೆ ಭಾರತ ತಂಡಕ್ಕೆ ಆಯ್ಕೆಯಾಗಿರುವ ಮಂಗಳೂರು ಮೂಲದ ಮುಂಬೈ ಆಲ್‌ರೌಂಡರ್‌ ತನುಷ್‌ ಕೋಟ್ಯಾನ್‌, ತಕ್ಷಣ ಆಯ್ಕೆಗೆ ಲಭ್ಯರಿದ್ದಿದ್ದೇ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಕಾರಣ ಎಂದು ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿದ ರೋಹಿತ್‌, ಕುಲದೀಪ್‌ ಯಾದವ್‌ಗೆ ವೀಸಾ ಸಿಗಲಿಲ್ಲ. ಅದಕ್ಕೆ ತನುಷ್‌ರನ್ನು ಆಯ್ಕೆ ಮಾಡಲಾಗಿದೆ ಎಂದು ತಮಾಷೆ ಮಾಡಿದರು. ನಂತರ ಮಾತಾಡಿದ ಅವರು “ತನುಷ್‌ ಒಂದು ತಿಂಗಳ ಹಿಂದೆ ಭಾರತ “ಎ’ ತಂಡದೊಡನೆ ಆಸ್ಟ್ರೇಲಿಯಾದಲ್ಲಿ ಆಡಿದ್ದಾರೆ. ಉತ್ತಮ ಲಯದಲ್ಲೂ ಇದ್ದಾರೆ, ತಕ್ಷಣಕ್ಕೆ ಲಭ್ಯವಿದ್ದಾರೆ. ಇನ್ನು ಕುಲದೀಪ್‌ಗೆ ಫಿಟೆ°ಸ್‌ ಸಮಸ್ಯೆಯಿದೆ, ಅಕ್ಷರ್‌ ಪಟೇಲ್‌ ಮಗು ಹುಟ್ಟಿದ ಸಂಭ್ರಮದಲ್ಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ತನುಷ್‌ಗೆ ಸ್ಥಾನ ಅನುಮಾನ: ಮೆಲ್ಬರ್ನ್ ಟೆಸ್ಟ್‌ ಪಂದ್ಯದ ಬೌಲಿಂಗ್‌ ಸಂಯೋಜನೆ ಕುರಿತು ಪ್ರತಿಕ್ರಿಯಿಸಿದ ರೋಹಿತ್‌, “ಇಲ್ಲಿ ಇಬ್ಬರು ಸ್ಪಿನ್ನರ್‌ಗಳ ಆವಶ್ಯಕತೆ ಕಾಣುವುದಿಲ್ಲ’ ಎಂದರು. ಹೀಗಾಗಿ ಉಡುಪಿ ಮೂಲದ ತನುಷ್‌ ಕೋಟ್ಯಾನ್‌ ಟೆಸ್ಟ್‌ ಪಾದಾರ್ಪಣೆ ಮಾಡುವ ಸಾಧ್ಯತೆ ಕಡಿಮೆ ಎಂದೇ ಹೇಳಬೇಕು.

ಗಾಯಾಳುಗಳ ಪಟ್ಟಿಯಲ್ಲಿದ್ದ ಆಲ್‌ರೌಂಡರ್‌ ರವೀಂದ್ರ ಜಡೇಜ ಕೂಡ ಮಂಗಳವಾರ ಯಾವುದೇ ಸಮಸ್ಯೆ ಇಲ್ಲದೆ ಅಭ್ಯಾಸ ನಡೆಸಿದ್ದಾರೆ.

ತಂಡದ ಬ್ಯಾಟಿಂಗ್‌ ಸರದಿಯ ಕುರಿತಾದ ಪ್ರಶ್ನೆಗೆ, “ತಂಡದ ಹಿತದೃಷ್ಟಿಯಿಂದ ಯಾವುದು ಉತ್ತಮವೋ ಆ ಪ್ರಕಾರ ಬ್ಯಾಟಿಂಗ್‌ ಲೈನ್‌ಅಪ್‌ ಇರಲಿದೆ. ಇದು ನಾವು ನಾವೇ ಚರ್ಚಿಸಿ ಪರಿಹರಿಸಿಕೊಳ್ಳುವ ಸಂಗತಿ. ಪ್ರತಿಯೊಂದು ಪತ್ರಿಕಾಗೋಷ್ಠಿಯಲ್ಲಿ ಇದನ್ನು ಹೇಳಬೇಕಿಲ್ಲ’ ಎಂದರು.

Advertisement

“ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌ ಮತ್ತು ರಿಷಭ್‌ ಪಂತ್‌ ಸದ್ಯ ಒಂದೇ ದೋಣಿಯಲ್ಲಿದ್ದಾರೆ. ಇವರ ಫಾರ್ಮ್ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ. ಎಲ್ಲರೂ ಆಸ್ಟ್ರೇಲಿಯಾದ ಬೌಲರ್‌ಗಳನ್ನು ಎದುರಿಸಿದ್ದಾರೆ. ಮೆಲ್ಬರ್ನ್ ನಲ್ಲೂ ಅದೇ ಬೌಲರ್ ಇರುತ್ತಾರೆ’ ಎಂದರು.

ಆದರೆ ಸದ್ಯದ ಚಿಂತೆಯೆಂದರೆ ಸ್ವತಃ ರೋಹಿತ್‌ ಲಯ. ಈ ಸರಣಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ಅವರ ಗಳಿಕೆ ಕೇವಲ 10, 3 ಮತ್ತು 6 ರನ್‌ ಮಾತ್ರ. ಫಾರ್ಮ್ ಕಂಡುಕೊಳ್ಳುವ ವಿಶ್ವಾಸ ಅವರದ್ದು.

ಗಿಲ್‌ ಪಂದ್ಯಕ್ಕೆ ಫಿಟ್‌: ಅಭ್ಯಾಸದ ವೇಳೆ ಬಲಗೈಗೆ ಗಾಯ ಮಾಡಿಕೊಂಡರೂ ಶುಭಮನ್‌ ಗಿಲ್‌ ಅಭ್ಯಾಸ ನಡೆಸಿದರು. ಅವರು ಪಂದ್ಯಕ್ಕೆ ಸಿದ್ಧವಾಗಿದ್ದಾರೆ ಎಂದು ತಂಡ ತಿಳಿಸಿದೆ.

ನಾನು ಫಿಟ್‌, ಆಡ್ತೀನಿ
ನಾನು ಸಂಪೂರ್ಣ ಫಿಟ್‌ನೆಸ್‌ಗೆ ಮರಳಿದ್ದೇನೆ, ನನ್ನ ಮೊಣಕಾಲು ನೋವು ಗುಣವಾಗಿದೆ, ಯಾವುದೇ ಆತಂಕ ಇಲ್ಲ.
-ರೋಹಿತ್‌ ಶರ್ಮಾ, ಭಾರತದ ನಾಯಕ

ಹೆಡ್‌ಗೆ ಗಾಯ: ಆಸೀಸ್‌ಗೆ ತಲೆನೋವು
ಲಯದಲ್ಲಿರುವ ಆಸೀಸ್‌ ಬ್ಯಾಟರ್‌ ಟ್ರಾವಿಸ್‌ ಹೆಡ್‌ ಎಡಗಾಲಿನ ಮಂಡಿನೋವಿಗೊಳಗಾಗಿದ್ದಾರೆ. ಅವರು ಬಾಕ್ಸಿಂಗ್‌ ಡೇ ಪಂದ್ಯದಲ್ಲಿ ಆಡುವುದು ಅನುಮಾನವಿದೆ. ಇದು ಆಸ್ಟ್ರೇಲಿಯಾಕ್ಕೆ ತಲೆನೋವನ್ನುಂಟು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next