ಲಂಡನ್: ಮಹಿಳಾ ವಿಶ್ವಕಪ್ ಕ್ರಿಕೆಟ್ ಪಂದ್ಯದ ವೇಳೆ ಭಾರತ ಮಹಿಳಾ ಕ್ರಿಕೆಟ್ ತಂಡ ಡಿಆರ್‌ಎಸ್ (ಅಂಪೈರ್ ತೀರ್ಪಿನ ವಿರುದ್ಧ ಮೇಲ್ಮನವಿ)ಗೆ ಮನವಿ ಸಲ್ಲಿಸಿ ಇತಿಹಾಸ ನಿರ್ಮಿಸಿದೆ.
ಒಟ್ಟಾರೆ ಮಹಿಳಾ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ತಂಡವೊಂದು ಡಿಆರ್‌ಎಸ್‌ಗೆ ಮನವಿ ಸಲ್ಲಿಸಿದ ಹೆಗ್ಗಳಿಕೆ
ಮಿಥಾಲಿ ರಾಜ್ ಪಡೆಯದ್ದಾಗಿದೆ. ಅಷ್ಟೇ ಅಲ್ಲ ಡಿಆರ್‌ಎಸ್ ಬಳಸಿ ಯಶಸ್ವಿಯಾಗಿರುವ ಕೀರ್ತಿಯೂ ಭಾರತದ್ದಾಗಿದೆ.
ಇಂಗ್ಲೆಂಡ್ ವಿರುದ್ಧದ ಭಾರತದ ಮೊದಲ ಪಂದ್ಯದ ವೇಳೆ ಆಂಗ್ಲ ಬ್ಯಾಟ್ಸ್‌ವುಮನ್ ನತಾಲಿ ಸೆð„ವರ್, ದೀಪ್ತಿ ಶರ್ಮ ಎಸೆದ ಚೆಂಡನ್ನು ಸ್ವೀಪ್ ಮಾಡಲು ಪ್ರಯತ್ನಿಸಿದ್ದಾರೆ. ಆಗ ಚೆಂಡು ಮೇಲೆ ಚಿಮ್ಮಿತು. ವಿಕೆಟ್ ಕೀಪರ್ ಸುಶ್ಮಾ ಶರ್ಮ ಕ್ಯಾಚ್ ಆಗಿ ಪರಿವರ್ತಿಸಿಕೊಂಡರು. ಔಟ್‌ಗಾಗಿ ದೀಪ್ತಿ ಮನವಿ ಸಲ್ಲಿಸಿದರು. ಅಂಪೈರ್ ಔಟ್ ನೀಡಲಿಲ್ಲ. ತಕ್ಷಣ ನಾಯಕಿ ಮಿಥಾಲಿ ಡಿಆರ್‌ಎಸ್‌ಗೆ ಮೊರೆ ಹೋಗಿ ಯಶಸ್ವಿಯಾದರು.