ಮುಂಬೈ: ಭಾರತ ತಂಡದ ಐರ್ಲೆಂಡ್ ಪ್ರವಾಸದ ವೇಳಾಪಟ್ಟಿ ಬಿಡುಗಡೆಯಾಗಿದೆ. ಐರ್ಲೆಂಡ್ ನಲ್ಲಿ ಭಾರತ ತಂಡವು ಮೂರು ಟಿ20 ಪಂದ್ಯಗಳನ್ನು ಆಡಲಿದ್ದು, ಆಗಸ್ಟ್ 18ರಿಂದ 23ರವರೆಗೆ ಪಂದ್ಯಗಳು ನಡೆಯಲಿದೆ.
“12 ತಿಂಗಳ ಅಂತರದಲ್ಲಿ ಎರಡನೇ ಬಾರಿ ಭಾರತ ತಂಡವನ್ನು ನಮ್ಮ ನೆಲಕ್ಕೆ ಆಹ್ವಾನಿಸಲು ನಮಗೆ ಸಂತಸವಾಗುತ್ತಿದೆ” ಎಂದು ಕ್ರಿಕೆಟ್ ಐರ್ಲೆಂಡ್ ನ ಮುಖ್ಯ ಕಾರ್ಯನಿರ್ವಾಹಕ ವಾರೆನ್ ಡ್ಯೂಟ್ರೋಮ್ ಹೇಳಿದ್ದಾರೆ.
ಮೂರು ಟೆಸ್ಟ್‌ಗಳು ಮತ್ತು ಐದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಒಳಗೊಂಡಿರುವ ವೆಸ್ಟ್ ಇಂಡೀಸ್ ಸರಣಿಗೆ ಮುಂದಿನ ತಿಂಗಳು ಪ್ರವಾಸ ಕೈಗೊಳ್ಳಲಿರುವ ಭಾರತವು ಬಳಿಕ ಐರ್ಲೆಂಡ್ ಪ್ರವಾಸಕ್ಕೆ ತೆರಳಲಿದೆ.
ಇದನ್ನೂ ಓದಿ:ಕಾಲೇಜಿನ ಆವರಣದಲ್ಲೇ ವಿದ್ಯಾರ್ಥಿನಿಗೆ ಹೃದಯಾಘಾತ… ಆಸ್ಪತ್ರೆ ದಾರಿಯಲ್ಲೇ ಕೊನೆಯುಸಿರು
ಸರಣಿಯ ಮೂರು ಟಿ20 ಪಂದ್ಯಗಳೂ ಮಲಾಹೈಡ್ ನಲ್ಲಿ ನಡೆಯಲಿದೆ. ಆಗಸ್ಟ್ 18, 20, 23 ರಂದು ಪಂದ್ಯಗಳು ನಡೆಯಲಿದೆ.
ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಐದು ಟಿ20 ಪಂದ್ಯಗಳನ್ನು ಆಡಲಿದೆ. ಇದರ ಬಳಿಕ ಐರ್ಲೆಂಡ್ ಗೆ ತೆರಳಲಿದೆ. ಹಾರ್ದಿಕ್ ಪಾಂಡ್ಯ ಬಹುತೇಕ ಭಾರತ ತಂಡದ ನಾಯಕತ್ವ ಸಾಧ್ಯತೆಯಿದೆ.