ಹೊಸದಿಲ್ಲಿ: ಭಾರತದ ಇಸ್ರೋ, ಅಮೆರಿಕದ “ನಾಸಾ’ದ ಹಾದಿಯಲ್ಲಿ ಸಾಗಲು ಸಜ್ಜಾಗಿದೆ. ನೌಕೆ ಉಡಾವಣೆ, ಸ್ಯಾಟಲೈಟ್ ನೇವಿಗೇಶನ್, ಮಾನವ ಬಾಹ್ಯಾಕಾಶ ಯೋಜನೆ, ಆಳ ಬಾಹ್ಯಾಕಾಶ ಪರಿಶೋಧನೆ… ಈ ಎಲ್ಲ ನೀತಿಗಳಲ್ಲಿ ಮಾರ್ಪಾಡು ತರಲು ಇಸ್ರೋ ತೀರ್ಮಾನಿಸಿದೆ.
ಅತ್ಯಾಧುನಿಕ ಆಲೋಚನೆ ಯುಳ್ಳ “ಸ್ಪೇಸ್ ಎಕ್ಸ್’ನಂಥ ಖಾಸಗಿ ಸಂಸ್ಥೆಗಳನ್ನು ಭಾಗಿ ಮಾಡಿಕೊಂಡು, ನಾಸಾ ಬಾಹ್ಯಾ ಕಾಶದಲ್ಲಿ ಹಲವು ಮೈಲುಗಲ್ಲು ಗಳನ್ನು ನೆಟ್ಟಿದೆ. ಖಾಸಗಿ ಸಂಸ್ಥೆ ಗಳಿಗೆ ಹೆಚ್ಚು ಹೂಡಿಕೆಗೆ ಅವಕಾಶ ನೀಡುವುದು, ಪ್ರಾದೇಶಿಕ ಕಂಪೆನಿಗಳಿಗೆ ಹೆಚ್ಚೆಚ್ಚು ಅನ್ವೇಷಣೆಗೆ ಉತ್ತೇಜಿಸುವ- ಈ ಎರಡೂ ತಂತ್ರ ಗಳನ್ನೂ ಇಸ್ರೋ ಅಳವಡಿಸಿಕೊಳ್ಳುತ್ತಿದೆ ಎಂದು “ದ ಇಕನಾಮಿಕ್ ಟೈಮ್ಸ್’ ವಿಶ್ಲೇ ಷಿ ಸಿದೆ.
ಶಿವನ್ ಸುಳಿವು: “ನಾವು ಸಂಶೋಧನಾ ರಂಗದಲ್ಲಿ ಸ್ಪರ್ಧೆ ಹುಟ್ಟುಹಾಕಲು ಯೋಜಿಸಿದ್ದೇವೆ. ಇದರಿಂದಾಗಿ ಬಾಹ್ಯಾಕಾಶ ತಂತ್ರಜ್ಞಾನ ಸಿದ್ಧಪಡಿಸುವ ಸ್ಥಳೀಯ ಕಂಪೆನಿಗಳಿಗೆ ಜಾಗತಿಕವಾಗಿ ಬೆಳೆಯಲು ಸಾಧ್ಯವಾಗಲಿದೆ’ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.
“ಬಾಹ್ಯಾಕಾಶ ತಂತ್ರಜ್ಞಾನ ತುಂಬಾ ದುಬಾರಿ. ಭಾರತೀಯ ಕೈಗಾರಿಕೆಗಳಿಗೆ ಇದನ್ನು ಕಾರ್ಯಸಾಧ್ಯವಾಗಿಸಲು ಇಸ್ರೋ ತಂತ್ರಜ್ಞಾನ ಮಾರುಕಟ್ಟೆ ಕಲ್ಪಿಸಲಿದೆ. ಬಾಹ್ಯಾಕಾಶ ತಂತ್ರಜ್ಞಾನ ವನ್ನು ಅತಿ ಸರಳ ಮತ್ತು ಅತಿ ಕಡಿಮೆ ಬೆಲೆಗೆ ಮಾರ್ಪಡಿಸುವ ಗುರಿ ನಮ್ಮದು’ ಎಂದು ವಿವರಿಸಿದ್ದಾರೆ.
ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಸ್ಥಾಪನೆ ಮೂಲಕ ಇಸ್ರೋ ಖಾಸಗಿ ಸಂಸ್ಥೆ, ಸ್ಟಾರ್ಟ್‌ಅಪ್‌ಗ್ಳಿಗೆ ಆಗಸ್ಟ್‌ನಿಂದಲೇ ಹಲವು ಮಹತ್ತರ ಹೊಣೆ ವಹಿಸಿದೆ. ಚೆನ್ನೈ ಮೂಲದ ಸ್ಟಾರ್ಟ್‌ಅಪ್ ಅಗ್ನಿಕುಲ್ ಕಾಸ್ಮೋಸ್ ಜತೆಗೆ 100 ಕಿಲೋ ಸ್ಯಾಟಲೈಟನ್ನು ಕೆಳ ಭೂ ಕಕ್ಷೆಗೆ ದಾಟಿಸುವ ಸಣ್ಣ ರಾಕೆಟ್‌ಗಳ ನಿರ್ಮಾಣ ಒಪ್ಪಂದಕ್ಕೆ ಎನ್‌ಎಸ್‌ಐಎಲ್ ಇತ್ತೀಚೆಗಷ್ಟೇ ಸಹಿಹಾಕಿತ್ತು.
ಬೆಂಗಳೂರು ಮೂಲದ ಪಿಕ್ಸೆಲ್ ಸಂಸ್ಥೆ ಕೂಡ ಭೂ ವೀಕ್ಷಣಾ ಉಪಗ್ರಹಗಳನ್ನು ನಿರ್ಮಿಸು ತ್ತಿದ್ದು, ಪಿಎಸ್‌ಎಲ್‌ವಿ ಮೂಲಕ ಇವು 2021ರಲ್ಲಿ ನಭ ಸೇರಲಿವೆ. ಭಾರತದಲ್ಲಿ 50ಕ್ಕೂ ಅಧಿಕ ಸ್ಪೇಸ್ ಸ್ಟಾರ್ಟ್‌ಅಪ್‌ಗ್ಳಿದ್ದು, ಸಾವಿರಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳು ಬಾಹ್ಯಾಕಾಶ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿವೆ.
ಕೊರೊನಾ ಬಿಕ್ಕಟ್ಟಿನ ಕಾರಣದಿಂದಾಗಿ ಇಸ್ರೋದ ಚೊಚ್ಚಲ ಮಾನವಸಹಿತ ಮೊದಲ ಗಗನಯಾನ ಯೋಜನೆ ಒಂದು ವರ್ಷ ತಡವಾಗುವ ಸಾಧ್ಯತೆ ಇದೆ.
ಕೆ. ಶಿವನ್, ಇಸ್ರೋ ಅಧ್ಯಕ್ಷ