Advertisement
ಬಿಹಾರದ ಕಾರಾಕಾಟ ಮತ್ತು ಪಾಟಲಿಪುತ್ರ ಲೋಕಸಭೆ ಕ್ಷೇತ್ರಗಳ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ, ಬಿಹಾರವು ಸಾಮಾಜಿಕ ನ್ಯಾಯದ ಹೋರಾಟಕ್ಕೆ ದಿಕ್ಕು ತೋರಿದ ನೆಲ. ಎಸ್‌ಸಿ, ಎಸ್‌ಟಿ, ಒಬಿಸಿಗಳ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡುವ ಕುತಂತ್ರವನ್ನು ನಾನು ತಡೆಯುತ್ತೇನೆ. ಪ್ರತಿಪಕ್ಷಗಳ ನಾಯಕರು ಗುಲಾಮರಾಗಿ, ಮುಸ್ಲಿಮರ ಮುಂದೆ ಮುಜ್ರಾ ನೃತ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪಂಜಾಬ್, ತೆಲಂಗಾಣ, ತಮಿಳುನಾಡಿನಲ್ಲಿ ಬಿಹಾರದ ವಲಸಿಗರನ್ನು ಅವಮಾನ ಮಾಡಿದರೂ ಪ್ರತಿಪಕ್ಷಗಳ ನಾಯಕರು ಅದನ್ನು ಪ್ರತಿಭಟಿಸುವ ಧೈರ್ಯ ತೋರುವುದಿಲ್ಲ ಎಂದೂ ಆರೋಪಿಸಿದರು.
ಪ್ರಧಾನಿ ಮೋದಿಯವರ “ಮುಜ್ರಾ ನೃತ್ಯ’ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ, “ಭಾರತದ ಇತಿಹಾಸದಲ್ಲೇ ಯಾವ ಪ್ರಧಾನಮಂತ್ರಿಯೂ ಬಳಸದಂಥ ಕೀಳು ಮಟ್ಟದ ಭಾಷೆಯನ್ನು ಮೋದಿಯವರು ಬಳಸುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
Related Articles
ಮುಜ್ರಾ ಎನ್ನುವುದು ಒಂದು ನೃತ್ಯ ಪ್ರಕಾರ. ಭಾರತದಲ್ಲಿ ಮೊಘಲರ ಆಳ್ವಿಕೆ ಸಮಯದಲ್ಲಿ ಇದು ಪ್ರವರ್ಧಮಾನಕ್ಕೆ ಬಂತು. ಮೊಘಲ್ ರಾಜರ ಆಸ್ಥಾನದಲ್ಲಿ ನವಾಬರ ಮುಂದೆ ಯುವತಿಯರ ಸಮೂಹವು ಈ ನೃತ್ಯ ಮಾಡುತ್ತಾ, ಮನರಂಜನೆ ನೀಡುತ್ತಿತ್ತು.
Advertisement