Advertisement
ಹಿಂಗು “ಕ್ರಾಂತಿ’ ಶುರು!ಭಾರತದಲ್ಲಿ ಯಾವ ಮಣ್ಣು, ವಾತಾವರಣ ಹಿಂಗು ಬೆಳೆಗೆ ಸೂಕ್ತ ಎನ್ನುವುದರ ಕುರಿತು ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‌ಐಆರ್) 2016ರಿಂದ ಸಂಶೋಧನೆ ಕೈಗೊಂಡಿತ್ತು. ಹಿಮಾಚಲ ಪ್ರದೇಶದ ಲಹೌಲ್- ಸ್ಪಿಟಿ ಪ್ರದೇಶಗಳು, ಲಡಾಖ್‌ನಲ್ಲಿ ಹಿಂಗು ಬೆಳೆಗೆ ಸೂಕ್ತ ವಾತಾವರಣ ಇರುವುದು ದೃಢವಾಗಿದೆ.
ಹಿಮಾಚಲ ಪ್ರದೇಶದ ಪಾಲಂಪುರದ 5 ಹೆಕ್ಟೇರ್ ಕೃಷಿ ಜಮೀನಿನಲ್ಲಿ ಸಿಎಸ್‌ಐಆರ್ ತಜ್ಞರು ಹಿಂಗು ಕೃಷಿ ಆರಂಭಿಸಿದ್ದಾರೆ. ಮುಂದಿನ ಪ್ರಾಜೆಕ್ಟ್ ಸಿಹ್ಯಾಬ್, ಲಹೌಲ್ ಸ್ಪಿಟಿ, ರಿಬ್ಲಿಂಗ್‌ಗಳಲ್ಲಿ ನಡೆಯಲಿದೆ. ಹಿಂಗು ಫಸಲು ಕೈಗೆ ಬರಲು 5 ವರ್ಷಗಳು ಕಾಯಬೇಕು. ಮುಂದಿನ 3 ವರ್ಷಗಳಲ್ಲಿ 300 ಹೆಕ್ಟೇರ್ ಹಿಂಗು ಕೃಷಿ ಗುರಿ ಹೊಂದಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ 4 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಭಾರತ ಏಕೆ ಬೆಳೆದಿರಲಿಲ್ಲ?
ಭಾರತದ ವಿಶ್ವದ ನಂ.1 ಹಿಂಗು ಗ್ರಾಹಕ ರಾಷ್ಟ್ರವಾದರೂ, ಆ ಬೆಳೆಗೆ ಸೂಕ್ತ ವಾತಾವರಣ ಇಲ್ಲಿಲ್ಲ. ಶೀತ ಮತ್ತು ನಿರ್ದಿಷ್ಟ ಭೌಗೋಳಿಕ ವಾತಾವರಣದಲ್ಲಿ ಮಾತ್ರವೇ ಹಿಂಗು ಚೆನ್ನಾಗಿ ಬರುತ್ತದೆ.
Related Articles
ಭಾರತಕ್ಕೆ ಅತಿಹೆಚ್ಚು ಹಿಂಗು ಪೂರೈಸುವುದು ಆಫ್ಘಾನಿಸ್ತಾನ. ಇರಾನ್, ಉಜ್ಬೇಕಿಸ್ತಾನದಿಂದಲೂ ತರಿಸಿಕೊಳ್ಳುತ್ತೇವೆ.
Advertisement
ಬೇಡಿಕೆ ಹೇಗಿದೆ?ವಿಶ್ವದ ಶೇ.40ರಷ್ಟು ಹಿಂಗು ಗ್ರಾಹಕರನ್ನು ಭಾರತ ಹೊಂದಿದೆ. ಪ್ರತಿವರ್ಷ 600 ಕೋಟಿ ರೂ. ಮೌಲ್ಯದ 1200 ಮೆಟ್ರಿಕ್ ಟನ್ ಹಿಂಗನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತೇವೆ.