Advertisement

ಭಾರತ-ಬಾಂಗ್ಲಾ ಸುವರ್ಣ ಅಧ್ಯಾಯ

11:00 AM May 26, 2018 | Team Udayavani |

ಶಾಂತಿನಿಕೇತನ: ಭಾರತ ಮತ್ತು ಬಾಂಗ್ಲಾದೇಶದ ಕಳೆದ ನಾಲ್ಕು ವರ್ಷದ ಸಂಬಂಧವು ಸುವರ್ಣ ಅಧ್ಯಾಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಪ.ಬಂಗಾಲದಲ್ಲಿನ ಶಾಂತಿನಿಕೇತನದಲ್ಲಿರುವ ವಿಶ್ವ ಭಾರತಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಿರ್ಮಿಸಲಾಗಿರುವ ಬಾಂಗ್ಲಾದೇಶ ಭವನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. 

ಬಾಂಗ್ಲಾದೇಶದ ಅಭಿವೃದ್ಧಿಗಾಗಿ 52 ಸಾವಿರ ಕೋಟಿ ರೂ. ಸಾಲ ಒದಗಿಸಲಾಗಿದೆ. ಕಳೆದ ವರ್ಷ ಕಥುವಾ,  ಖುಲಾ° ಮಧ್ಯೆ ಎಸಿ ರೈಲನ್ನು ಪರಿಚಯಿಸಲಾಗಿದೆ. ಇದಕ್ಕೆ ಬಂಧನ್‌ ಎಂದು ಹೆಸರಿಡಲಾಗಿದೆ ಎಂದರು. ಬಾಂಗ್ಲಾಕ್ಕೆ ನಾವು ಸದ್ಯ 600 ಮೆ.ವ್ಯಾ ವಿದ್ಯುತ್‌ ನೀಡುತ್ತಿದ್ದು, ಶೀಘ್ರದಲ್ಲೇ 1000 ಮೆ.ವ್ಯಾಗೆ ಏರಿಸಲಿದ್ದೇವೆ. 2021ರೊಳಗೆ ಬಾಂಗ್ಲಾದ ಎಲ್ಲರಿಗೂ ವಿದ್ಯುತ್‌ ನೀಡುವ ಯೋಜನೆಗೆ ನೆರವಾಗುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next