Advertisement
1947ರ ಆ. 14ರ ರಾತ್ರಿ 9.30ರಿಂದ ಮರುದಿನ ರಾತ್ರಿವರೆಗೆ ನಗರದ ವಿವಿಧೆಡೆ ಪ್ರಥಮ ಸ್ವಾತಂತ್ರ್ಯೋತ್ಸವ ಆಚರಣೆಯಾಗಿತ್ತು. ಎಲ್ಲಾ ದೇವಸ್ಥಾನಗಳು, ಮಠಗಳು, ಮನೆಗಳು, ರಸ್ತೆಗಳು ಅಲಂಕರಣಗೊಂಡಿದ್ದವು. ಆ. 14ರ ರಾತ್ರಿ ಎಂ.ವಿ.ಹೆಗ್ಡೆ ಅವರು ರಚಿಸಿದ “ಸ್ವರಾಜ್ಯ ವಿಜಯ’ ಎಂಬ ಯಕ್ಷಗಾನ ತಾಳಮದ್ದಲೆಯನ್ನು ಯುವಕ ಮಂಡಲದ ಸದಸ್ಯರು ಶ್ರೀಅನಂತೇಶ್ವರದೇವಸ್ಥಾನದ ಹೆಬ್ಬಾಗಿಲಿನಲ್ಲಿ ಪ್ರಸ್ತುತಪಡಿಸಿದರು.
Related Articles
Advertisement
ಇವೆರಡು ಐತಿಹಾಸಿಕ ತಾಳಮದ್ದಳೆಗಳ ಬಳಿಕ ಮೂಡಿದ ಚಿಂತನೆ ದೇಶದ ಮುಕುಟಮಣಿಯಾದ ಕಾಶ್ಮೀರದಲ್ಲಿ 370ನೆಯ ವಿಧಿ ರದ್ದಾಗಿ ಅಲ್ಲೊಂದು ಗತಕಾಲದ ವೈಭವ ಕಾಣುವ ಆಶಾವಾದ ಮೂಡಿ ದಾಗ. ಇದಕ್ಕೆ “ಕಾಶ್ಮೀರ ವಿಜಯ’ ಎಂದು ನಾಮಕರಣಗೊಳಿಸಲಾಯಿತು. “ಕಾಶ್ಮೀರ ವಿಜಯ’ ಪ್ರಸಂಗವು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥರ ಗೌರವಾಧ್ಯಕ್ಷತೆ, ಪ್ರಮುಖರನ್ನೊಳಗೊಂಡ “ಸುಶಾಸನ ಸಮಿತಿ’ಯ ಸಂಯೋಜನೆಯಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಗಾನ ಸಾರಥ್ಯದಲ್ಲಿ ಉಡುಪಿ, ಮಂಗಳೂರು, ಮಣಿಪಾಲ ಶಿವಪಾಡಿಯಲ್ಲಿ ಪ್ರಯೋಗಗೊಂಡಿತು. ಭಾರತದ ಸಾಹಿತ್ಯ, ಸಂಸ್ಕೃತಿ ಹಾಗೂ ತತ್ವಜ್ಞಾನಗಳಿಗೆ ಅಪಾರ ಕೊಡುಗೆಯನ್ನು ನೀಡಿ ಶಾರದಾ ದೇಶವೆಂದೇ ಪ್ರಸಿದ್ಧವಾಗಿದ್ದ ಕಾಶ್ಮೀರದ ಇತಿಹಾಸವನ್ನು ಕಲಾತ್ಮಕವಾಗಿ ಪರಿಚಯಿಸುವ ಕೆಲಸ ಇದಾಗಿದೆ.
ಯಕ್ಷಗಾನೀಯ ಪದ್ಯಸಿರಿಯಿಂದ ಶ್ರೀಮಂತವಾದ ಕಾಶ್ಮೀರ ವಿಜಯ ಪ್ರಸಂಗವು ಹಿರಿಯ ಕಲಾವಿದರ ಸಮ್ಮುಖದಲ್ಲಿ ಸುಧಾಕರ ಆಚಾರ್ಯರ ಕಲಾರಾಧನೆಯ 33ನೆಯ ವರ್ಷದ ಸ್ವಾತಂತ್ರೊéàತ್ಸವ ತಾಳಮದ್ದಳೆ ಆಚರಣೆಯಾಗಿ ಆ. 15 ರಂದು ಕಿದಿಯೂರು ಹೊಟೇಲ್ ಶೇಷಶಯನ ಹಾಲ್‌ನಲ್ಲಿ ನಡೆಯಲಿದೆ. ಮಧ್ಯಾಹ್ನ 1.30ರಿಂದ ಪಾರ್ತಿಸುಬ್ಬ ವಿರಚಿತ, ಪ್ರೊ|ಪವನ್ ಕಿರಣಕೆರೆ ಪರಿಕಲ್ಪಿತ “ಸುಂದರ ಭ್ರಾತೃತ್ವ’, ಸಂಜೆ 4.30ರಿಂದ “ಕಾಶ್ಮೀರ ವಿಜಯ’ ತಾಳಮದ್ದಳೆ ನಡೆಯಲಿದೆ.