ಬೆಂಗಳೂರು: ನಗರದಲ್ಲಿ ಹಸಿಕಸ ವಿಂಗಡಣೆ ಪ್ರಮಾಣ ಹೆಚ್ಚಳವಾಗಿದ್ದು, ಮುಚ್ಚಿರುವ ಹಸಿಕಸ ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸದೆ ಇದ್ದರೆ, ಮುಂದಿನ ದಿನಗಳಲ್ಲಿ ಹಸಿಕಸವನ್ನೂ ಭೂಭರ್ತಿಗೆ ಸಾಗಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.
ನಗರದಲ್ಲಿ ಪ್ರತ್ಯೇಕ ಹಸಿಕಸ ಸಂಗ್ರಹ ಯೋಜನೆಗೆ ಚಾಲನೆ ನೀಡಿದ ಮೇಲೆ ಹಾಗೂ ಮಾರ್ಷಲ್‌ಗಳಿಂದ ದಂಡ ಮತ್ತು ಜಾಗೃತಿ ಮೂಡಿಸುತ್ತಿರುವುದರಿಂದ ಪಾಲಿಕೆ ವ್ಯಾಪ್ತಿಯ ಹಸಿಕಸ ಸಂಸ್ಕರಣಾ ಘಟಕಕ್ಕೆ ಹೆಚ್ಚು ಸಿಕಸ ಹೋಗುತ್ತಿದ್ದು, ಹಸಿ ಸಂಸ್ಕರಣಾ ಘಟಕಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇಲ್ಲಿಯವರೆಗೆ ನಗರದಲ್ಲಿ ಹಸಿಕಸ ವಿಂಗಡಣೆಯಾಗದೆ ಸಮಸ್ಯೆ ಆಗುತ್ತಿತ್ತು. ಇದೀಗ ಪ್ರತ್ಯೇಕ ಹಸಿಕಸ ಸಂಗ್ರಹ ಯೋಜನೆ ಜಾರಿಯಾದ ಮೇಲೆ ಮತ್ತೂಂದು ಹೊಸ ಸಮಸ್ಯೆ ಶುರುವಾಗಿದೆ. ಸಾರ್ವಜನಿಕರು ಹಸಿಕಸವನ್ನು ಪ್ರತ್ಯೇಕ ಮಾಡಿಕ ಕೊಡುವುದು ಹೆಚ್ಚಾಗುತ್ತಿರುವುದರಿಂದ ಸಹಜವಾಗಿಯೇ ಭೂಭರ್ತಿಗೆ ಹೋಗುವ ಮಿಶ್ರಕಸದ ಪ್ರಮಾಣ ಇಳಿಕೆಯಾಗಿದೆ. ಈ ಹಿಂದೆ ಪ್ರತಿ ಹಸಿಕಸ ಸಂಸ್ಕರಣಾ ಘಟಕಕ್ಕೂ 100ರಿಂದ 150 ಟನ್ ಹಸಿಕಸ ಸಾಗಿಸಲಾಗುತ್ತಿತ್ತು. ಇದೀಗ ಕಸ ಪ್ರಮಾಣ ಎರಡರಷ್ಟಾಗಿದ್ದು,ಮೂರುಹಸಿ ಕಸ ಸಂಸ್ಕರಣಾ ಘಟಕಗಳೂ ವಿವಿಧ ಕಾರಣಗ ಳಿಂದ ಮುಚ್ಚಿರುವುದು ಸಮಸ್ಯೆ ಶುರುವಾಗಿದೆ.
ಸ್ಥಗಿತಗೊಂಡಿರುವ ಘಟಕಗಳು: ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಲ್ಲಿ ವ್ಯಾಜ್ಯ ಇರುವುದರಿಂದ ಲಿಂಗಧೀರನಹಳ್ಳಿ ಹಸಿಕಸ ಸಂಸ್ಕರಣಾ ಘಟಕ ಪ್ರಾರಂಭ ಕಗ್ಗಂಟಾಗೇ ಉಳಿದಿದೆ. ಈ ಮಧ್ಯೆ ಸುಬ್ಬರಾಯನಪಾಳ್ಯ ಹಾಗೂ ಸೀಗೆಹಳ್ಳಿ ಘಟಕಗಳನ್ನು ಸ್ಥಳೀಯವಿರೋಧದಿಂದ ನಿಲ್ಲಿಸಲಾಗಿದೆ. ಉಳಿದಂತೆ ಕನ್ನಹಳ್ಳಿ, ಕೆಸಿಡಿಸಿ, ಚಿಕ್ಕನಾಗಮಂಗಲ ಹಾಗೂ ದೊಡ್ಡಬಿದರಕಲ್ಲು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಈ ನಾಲ್ಕು ಘಟಕಗಳ ಒಟ್ಟಾರೆ ಸಾಮರ್ಥ್ಯ 1,200 ಮೆಟ್ರಿಕ್ ಟನ್ ಇದೆ. ಸದ್ಯ 800ರಿಂದ 900 ಮೆಟ್ರಿಕ್‌ಟನ್ ಹಸಿಹಸ ಕಸ ಈ ಸಂಸ್ಕರಣಾ ಘಟಕಗಳಿಗೆ ಹೋಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹಸಿಕಸ ಈಘಟಕಗಳಿಗೆ ಬಂದರೆ ನಿರ್ವಹಣೆ ಸಮಸ್ಯೆಯಾಗಲಿದೆ.
ಘಟಕ ಪ್ರಾರಂಭವಾಗದಿದ್ದರೆ ಹಸಿ ಕಸವೂ ಭೂಭರ್ತಿಗೆ? : ನಗರದಲ್ಲಿ ಇಲ್ಲಿಯವರೆಗೆ ಕಸ ವಿಂಗಡಣೆಯಾಗದೆ ಸಮಸ್ಯೆಆಗುತ್ತಿತ್ತು.ಇದೀಗ ಕಸ ವಿಂಗಡಣೆಯಾದರೂ, ಭೂಭರ್ತಿಗೆ ಹಸಿಕಸ ಸಾಗಿಸ ಬೇಕಾದ ಅನಿವಾರ್ಯತೆ ಸೃಷ್ಟಿಯಾಗುವ ಸಾಧ್ಯತೆ ಇದೆ.ಈ ರೀತಿಹಸಿಕಸವೂ ಭೂಭರ್ತಿಗೆಹೋದರೆ ಪಾಲಿಕೆ ಇಲ್ಲಿಯವರೆಗೆ ಮಾಡಿದ ಎಲ್ಲ ಪ್ರಯತ್ನ ಗಳು ನೀರಿನಲ್ಲಿ ಹೋಮವಾಗಲಿದೆ. ಸಾರ್ವಜನಿ ಕರಿಂದಲೂ ತೀವ್ರ ಆಕ್ಷೇಪ ಹಾಗೂ ಆಕ್ರೋಶ ವ್ಯಕ್ತವಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ಸ್ಥಳೀಯರ ವಿರೋಧದಿಂದ ಸ್ಥಗಿತಗೊಂಡಿರುವ ಸುಬ್ಬರಾಯನಪಾಳ್ಯ ಹಾಗೂ ಸೀಗೆಹಳ್ಳಿ ಘಟಕಗಳನ್ನು ಪುನಃ ಪ್ರಾರಂಭಿಸುವುದಕ್ಕೆಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಈ ಕುರಿತು ಆಡಳಿತಾಧಿಕಾರಿ ಗೌರವ್ ಗುಪ್ತ ಅವರ ಗಮನಕ್ಕೂ ತರಲಾಗಿದೆ. ಶೀಘ್ರ ಕ್ರಮಕೈಗೊಳ್ಳಲಾಗುವುದು.
–ಡಿ. ರಂದೀಪ್, ಬಿಬಿಎಂಪಿ ವಿಶೇಷ ಆಯುಕ್ತ