Advertisement
ಟೌನ್‌ಹಾಲ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಮತದಾರರ ದಿನಾಚರಣೆ-2023′ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಸ್ಟ್ರೇಲಿಯಾ, ಪೇರು, ಅರ್ಜೆಂಟೀನಾ ಸಹಿತ ಹಲವು ದೇಶಗಳಲ್ಲಿ ಮತದಾನ ಕಡ್ಡಾಯವಾಗಿದೆ. ಮತದಾನ ಮಾಡದಿದ್ದರೆ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಭಾರತದಲ್ಲಿ ಸಾಕಷ್ಟು ಚರ್ಚೆಗಳ ಬಳಿಕ ಮತದಾನ ಕಡ್ಡಾಯ ಮಾಡದಿರಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವದ ಸಂಕೇತವಾದ ಭಾರತೀಯ ಸಂವಿಧಾನದಲ್ಲಿ ಸ್ವತಂತ್ರ ಚುನಾವಣ ಆಯೋಗ ಮತ್ತು ಚುನಾವಣ ಪ್ರಕ್ರಿಯೆಯ ಪರಿಕಲ್ಪನೆಯು ಸಮಾನತೆ ಮತ್ತು ಸ್ವಾತಂತ್ರÂದ ಹಕ್ಕಿನೊಂದಿಗೆ ಪ್ರತಿಯೊಬ್ಬ ವ್ಯಕ್ತಿಯ ಮತವನ್ನು ಪ್ರಮುಖವಾಗಿಸುತ್ತದೆ. 18ರಿಂದ 24 ವರ್ಷದೊಳಗಿನ ಹೆಚ್ಚಿನ ಯುವಕರು ಮತ್ತು ಇತರ ಕೆಲವರು ಮತದಾನದಲ್ಲಿ ಹೆಚ್ಚು ಆಸಕ್ತಿ ವಹಿಸುವುದಿಲ್ಲ ಎಂದು ಅನೇಕ ಅಂಕಿ-ಅಂಶಗಳು ತೋರಿಸುತ್ತವೆ. ಯುವಕರು ಮುಂದೆ ಬಂದು ದೇಶದ ನಾಯಕತ್ವದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಬೇಕು. ಚುನಾವಣೆಗಳಲ್ಲಿ ಮತದಾನ ಗಣರಾಜ್ಯಕ್ಕೆ ಯಜ್ಞವಿದ್ದಂತೆ. ಒಂದು ವೋಟು ಹಾಕದಿದ್ದರೆ ಏನಾಗುತ್ತದೋ ಎಂದು ಕೆಲವರು ಚುನಾವಣ ಸಮಯದಲ್ಲಿ ತಮ್ಮ ಮತವನ್ನು ಬಳಸುವುದಿಲ್ಲ. ಹಲವು ಬಾರಿ ಗೆಲುವು ಅಥವಾ ಸೋಲಿನ ನಿರ್ಧಾರವು ಕೇವಲ ಒಂದು ಮತವನ್ನು ಅವಲಂಬಿಸಿರುತ್ತದೆ.
Related Articles
Advertisement
ವಿವಿಧ ಚಟುವಟಿಕೆಭಾರತದ ಚುನಾವಣ ಆಯೋಗವು ಸ್ವೀಪ್ ಅಡಿಯಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸುತ್ತದೆ ಅಂದರೆ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣ ಭಾಗವಹಿಸುವಿಕೆ. ಹೊಸ ಮತದಾರರಲ್ಲಿ ನೋಂದಣಿ ಮತ್ತು ಮತದಾನದ ಬಗ್ಗೆ ಜಾಗೃತಿ ಮೂಡಿಸಲು, ಮತದಾರರ ಶಿಕ್ಷಣ ಮತ್ತು ಮಾಹಿತಿಗಾಗಿ ವಿಶೇಷ ಅಭಿಯಾನಗಳನ್ನು ಸಹ ಆಯೋಜಿಸಲಾಗಿದೆ. ಎಲೆಕ್ಟ್ರಾನಿಕ್ ಮಾಧ್ಯಮ, ಇವಿಎಂ, ವಿವಿ-ಪಿಇಟಿ ಇತ್ಯಾದಿಗಳ ಮೂಲಕ ಮತದಾರರ ಶಿಕ್ಷಣಕ್ಕಾಗಿ ಕೈಗೊಂಡ ಕ್ರಮವು ಭಾರತದ ಚುನಾವಣ ಆಯೋಗವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದು, ಶ್ಲಾಘನೀಯ ಕಾರ್ಯವಾಗಿದೆ. ಮತದಾರರ ಗುರುತಿನ ಚೀಟಿಯು ಒಂದು ಕ್ರಾಂತಿಕಾರಿ ಹೆಜ್ಜೆ ಹಾಗೂ ಪ್ರಜಾಪ್ರಭುತ್ವದ ಮೈಲಿಗಲ್ಲಾಗಿದೆ ಎಂದರು. ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.