Advertisement

ಭಾರತದ ವಿಶ್ವ ತಂಡದಲ್ಲಿ ಪಿ.ಯು.ಚಿತ್ರಾಗೆ ಸ್ಥಾನ ನೀಡಿ

10:25 AM Jul 29, 2017 | Team Udayavani |

ಕೊಚ್ಚಿ: ಮುಂದಿನ ತಿಂಗಳು ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌ನ ಭಾರತ ತಂಡದಲ್ಲಿ ಕೇರಳದ ಪಿ.ಯು. ಚಿತ್ರಾಗೆ ಸ್ಥಾನ ನೀಡಿ ಎಂದು ಕೇರಳ ಉಚ್ಚ ನ್ಯಾಯಾಲಯ ಆದೇಶಿಸಿದೆ. ಕೇಂದ್ರ ಸರ್ಕಾರ ಮತ್ತು ಭಾರತ ಅಥ್ಲೆಟಿಕ್ಸ್‌ ಒಕ್ಕೂಟಕ್ಕೆ ಮೇಲಿನಂತೆ ನ್ಯಾಯಪೀಠ ನಿರ್ದೇಶನ ನೀಡಿದೆ.

Advertisement

1500 ಮೀ. ಓಟದಲ್ಲಿ ಚಿತ್ರಾ ಭಾಗವಹಿಸುವುದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿ ಎಂದು ನ್ಯಾಯಾಲಯ ಸರ್ಕಾರಕ್ಕೆ ತಿಳಿಸಿದೆ. ಆಟಗಾರರನ್ನು ಆಯ್ಕೆ ಮಾಡಿದ ಕ್ರಮದಲ್ಲಿ ಪಾರದರ್ಶಕತೆ ಕಾಣುತ್ತಿಲ್ಲ, ಜೊತೆಗೆ ಕೆಲ ಯೋಗ್ಯ ಅಥ್ಲೀಟ್‌ಗಳನ್ನೂ ತಂಡಕ್ಕೆ ಸೇರಿಸಿಕೊಂಡಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದಕ್ಕೂ ಮೊದಲು ವಿಶ್ವ ಅಥ್ಲೆಟಿಕ್ಸ್‌ ಕೂಟಕ್ಕೆ ಅರ್ಹತೆ ಸಿಕ್ಕಿದ್ದರೂ ಭಾರತೀಯ ಅಥ್ಲೆಟಿಕ್ಸ್‌ ಸಂಸ್ಥೆ ಅವಕಾಶ ತನಗೆ ನಿರಾಕರಿಸಿದೆ ಎಂದು ಆರೋಪಿಸಿ ಚಿತ್ರಾ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಚಿತ್ರಾ ಅರ್ಜಿಯನ್ನು ನ್ಯಾಯಾಲಯ ಶುಕ್ರವಾರ ವಿಚಾರಣೆ ನಡೆಸಿತು. ಚಿತ್ರಾರನ್ನು ತಂಡದಿಂದ ಕೈಬಿಡಲು ಕಾರಣ ಏನು? ಅವರಿಗೇಕೆ ಸ್ಥಾನ ನೀಡಿಲ್ಲ? ಎಂದು ಎಎಫ್ಐ ಅನ್ನು ಪ್ರಶ್ನಿಸಿತು. ಇದೇ ವೇಳೆ ವಿವಿಧ ಕ್ರೀಡಾ ಸಂಸ್ಥೆಗಳ ಆದಾಯದ ಮೂಲವನ್ನು ತಿಳಿಸುವಂತೆ ನ್ಯಾಯಾಲಯ ತಿಳಿಸಿದೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ಬೇಕಾದ ಅಗತ್ಯ ವೇಗವನ್ನು ಚಿತ್ರಾ ಸಾಧಿಸಿಲ್ಲ, ಆದ್ದರಿಂದ ಅವರನ್ನು ತಂಡಕ್ಕೆ ಸೇರಿಸಿಕೊಂಡಿಲ್ಲ ಎಂದು ಎಎಫ್ಐ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ಚಿತ್ರಾ, ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ನಲ್ಲಿ ಚಿನ್ನ ಗೆದ್ದರು ಅರ್ಹತೆ ನೀಡಬಹುದೆಂಬ ನಿಯಮವೂ ಇದೆ ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next